ವರದಕ್ಷಿಣೆ ಕಿರುಕುಳದ ಸಂದೇಶ ನೀಡಿದ್ದ ಯುವತಿ ಶವವಾಗಿ ಪತ್ತೆ
ಆಯುರ್ವೇದ ವೈದ್ಯ ವೃತ್ತಿ ತರಬೇತಿ ಪಡೆಯುತ್ತಿದ್ದ ಯುವತಿಗೆ ಕಳೆದ ವರ್ಷ ಕಿರಣ್ ಕುಮಾರ್ ಎಂಬಾತನ ಜೊತೆ ವಿವಾಹವಾಗಿತ್ತು. ವಿವಾಹದ ಸಂದರ್ಭದಲ್ಲಿಯೇ 100 ಚಿನ್ನದ ನಾಣ್ಯ, 1 ಎಕರೆ ಜಮೀನು, 10 ಲಕ್ಷ ರೂ. ಮೌಲ್ಯದ ಕಾರು ವರದಕ್ಷಿಣೆಯಾಗಿ ನೀಡಲಾಗಿತ್ತು. ಹಾಗಿದ್ದರೂ ಅಳಿಯ ಮಗಳಿಗೆ ಕಿರುಕುಳ ನೀಡುತ್ತಿದ್ದ ಎಂದು ಪೋಷಕರು ಪೊಲೀಸರಿಗೆ ದೂರಿದ್ದಾರೆ. ಈ ಘಟನೆ ಬಗ್ಗೆ ಸ್ವತಃ ಕೇರಳ ಸಿಎಂ ಪಿಣರಾಯಿ ವಿಜಯನ್ ಕೂಡಾ ಸಂತಾಪ ವ್ಯಕ್ತಪಡಿಸಿದ್ದಾರೆ.