ಸ್ವಾತಂತ್ರ್ಯೋತ್ಸವದಂದು ಸಿಎಂ ಕುಮಾರಸ್ವಾಮಿ ಮಾಣಿಕ್ ಷಾ ಮೈದಾನದಲ್ಲಿ ಹೇಳಿದ್ದೇನು?

ಬುಧವಾರ, 15 ಆಗಸ್ಟ್ 2018 (09:42 IST)
ಬೆಂಗಳೂರು : ದೇಶದ 72 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಿಎಂ ಕುಮಾರಸ್ವಾಮಿ ಅವರು ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ಧ್ವಜಾರೋಹಣ ಮಾಡಿ ಭಾಷಣ ಮಾಡಿದರು.


ಸಿಎಂ ಕುಮಾರಸ್ವಾಮಿ ಅವರು  ತಮ್ಮ ಭಾಷಣದ ಆರಂಭದಲ್ಲಿ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ್ದಾರೆ. ನಂತರ ಸ್ವಾಂತಂತ್ರ್ಯ ಹೋರಾಟಗಾರರ ತ್ಯಾಗ ನೆನೆದ ಸಿಎಂ ಕುಮಾರಸ್ವಾಮಿ ಅವರು ಸ್ವಾತಂತ್ರ್ಯ ಭಾರತ ರೂಪುಗೊಂಡಿದ್ದು ಗಾಂಧಿ ಕನಸಿನಿಂದ. ಸ್ವಾಂತಂತ್ರ್ಯ ಸಮರದಲ್ಲಿ ಕರ್ನಾಟಕದ ಪಾತ್ರ ಅದ್ವಿತೀಯ ಎಂದರು.


ವೈವಿಧ್ಯತೆಯಲ್ಲಿ ಏಕತೆ ಸಾಧಿಸಿದ ದೇಶ ನಮ್ಮದು. ಅಹಿಂಸಾ ಸ್ವಾತಂತ್ರ್ಯ ಪಡೆದವರು ಭಾರತೀಯರು ಎಂದು ಹೇಳಿದ ಸಿಎಂ ಕುಮಾರಸ್ವಾಮಿ ಅವರು ಎಲ್ಲಾ ವೀರ ಸೇನಾನಿಗಳ ಪಾದಕಮಲಗಳಿಗೆ ತಮ್ಮ ನಮನ ಸಲ್ಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ