ಬಿಜೆಪಿಗೆ ಆಹ್ವಾನಿಸಿದ ಯತ್ನಾಳ್ ಗೆ ಎಂ.ಬಿ.ಪಾಟೀಲ್ ಹೇಳಿದ್ದೇನು?

ಬುಧವಾರ, 8 ಮೇ 2019 (13:19 IST)
ವಿಜಯಪುರ : ಎಂ.ಬಿ.ಪಾಟೀಲ್ ಬಿಜೆಪಿಗೆ ಆಹ್ವಾನಿಸುವುದರ ಬಗ್ಗೆ ಬಿಜೆಪಿ ಮುಖಂಡ ಬಸವರಾಜ್‌ ಪಾಟೀಲ್ ಯತ್ನಾಳ್ ಹೇಳಿಕೆಗೆ ಇದೀಗ ಗೃಹ ಸಚಿವ ಎಂ.ಬಿ.ಪಾಟೀಲ್ ಟಾಂಗ್ ನೀಡಿದ್ದಾರೆ.




ಯತ್ನಾಳ ಮನಸು ಮಾಡಿದ್ರೆ ಎಂ.ಬಿ. ಪಾಟೀಲರನ್ನು ಬಿಜೆಪಿಗೆ ತರಬಹುದು ಎಂದು ನನಗೆ ಹಲವರು ಹೇಳಿದ್ದರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದರು.


ಈ ಬಗ್ಗೆ ಇದೀಗ ಪ್ರತಿಕ್ರಿಯೆ ನೀಡಿದ ಎಂ.ಬಿ.ಪಾಟೀಲ್, ‘ನಾನು ಯಾರ ಮನೆ ಬಾಗಿಲನ್ನೂ ತಟ್ಟಿಲ್ಲಾ. ಯತ್ನಾಳ್ ಜೊತೆಗಿನ ಸ್ನೇಹವೇ ಬೇರೆ ರಾಜಕಾರಣವೇ ಬೇರೆ. ಯತ್ನಾಳ್ ಹೇಳಿಕೆಗೆ ಥ್ಯಾಂಕ್ಸ್ . ಬಿಜೆಪಿಗೆ ಆಹ್ವಾನಿಸಿದ್ದಕ್ಕೆ ನೋ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ