ಎಂಟಿಬಿ, ಹೆಚ್.ವಿಶ್ವನಾಥ್, ಆರ್.ಶಂಕರ್ ಗೆ ಸ್ಥಾನಮಾನ ನೀಡುವ ಬಗ್ಗೆ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದೇನು?

ಶನಿವಾರ, 30 ಮೇ 2020 (09:57 IST)
Normal 0 false false false EN-US X-NONE X-NONE

ಮೈಸೂರು : ಎಂಟಿಬಿ, ಹೆಚ್.ವಿಶ್ವನಾಥ್, ಆರ್.ಶಂಕರ್ ಗೆ ಸ್ಥಾನಮಾನ ನೀಡುವ ವಿಚಾರ ಮೂವರ ಬೆಂಬಲಕ್ಕೆ ನಾವಿದ್ದೇವೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

 

ಮೈಸೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮೂವರಿಗೂ ಸ್ಥಾನಮಾನ ನೀಡಲು ಸಿಎಂಗೆ ಒತ್ತಾಯಿಸುತ್ತೇವೆ, ಆಕಾಂಕ್ಷಿಗಳು ಸಿಎಂ ಬಿಎಸ್ ವೈ ಹೈಕಮಾಂಡ್  ಭೇಟಿಯಾಗಲಿ.  ಈ ಸಂದರ್ಭದಲ್ಲಿ ಬಂಡಾಯ, ಪ್ರತ್ಯೇಕ ಸಭೆ ಸರಿಯಾದ್ದದ್ದಲ್ಲ. ಕೆಲವು ಶಾಸಕರು, ಸಂಸದರು, ನನ್ನನ್ನು ಭೇಟಿಯಾಗಿದ್ದಾರೆ. ತಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ಇದನ್ನು ಸಿಎಂ ಗಮನಕ್ಕೆ ತರುವಂತೆ ಅವರು ನನಗೆ ಹೇಳಿದ್ದಾರೆ. ಆದರೆ ಯಾರೂ ಸಿಎಂ, ಸರ್ಕಾರದ ವಿರುದ್ಧ ಮಾತನಾಡಿಲ್ಲ ಎಂದು ಹೇಳಿದ್ದಾರೆ.

 

ಉಮೇಶ್ ಕತ್ತಿ ಸಹೋದರರ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆಗೆ ಟಿಕೆಟ್ ಸಿಗದಾಗ ರಾಜ್ಯಸಭೆಗೆ ಟಿಕೆಟ್ ಭರವಸೆ ನೀಡಿದ್ದಾರೆ.ಈ ಹಿನ್ನಲೆಯಲ್ಲಿ ಅವರ ಬೆಂಬಲಿಗರು ಸಭೆ ಮಾಡಿದ್ದಾರಷ್ಟೇ. ಪ್ರತಾಪ್ ಗೌಡ ಪಾಟೀಲ್, ಮುನಿರತ್ನ ವಿಚಾರ ಆಮೇಲೆ. ವಿರೋಧ ಪಕ್ಷದವರು ಇನ್ನೂ ಅಧಿಕಾರ ಸ್ವೀಕಾರ ಮಾಡಿಲ್ಲ. ಇನ್ನು ಸರ್ಕಾರ ರಚನೆ ಮಾಡುವ ಪ್ರಯತ್ನ ಸುಳ್ಳು ಎಂದು ಅವರು ತಿಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ