ತಬ್ಲಿಘಿ ನಂತರ ಮುಂಬೈ ಕಾಟ : ದ್ವಿಶತಕ ದಾಟಿದ ಸೋಂಕಿತರು
ಮುಂಬೈ ಮಾರಿ ಈ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚು ಮಾಡುತ್ತಿದೆ.
ಆರೋಗ್ಯ ಇಲಾಖೆಯು ಶುಕ್ರವಾರ ಬೆಳಗ್ಗೆ ಹೊರಡಿಸಿರುವ ಬುಲೆಟಿನ್ ನಲ್ಲಿ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ಸರ್ಕಾರಿ ಕ್ವಾರಂಟೈನ್ ನಲ್ಲಿರುವ ಕಲಬುರಗಿ ಜಿಲ್ಲೆಯ 15 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಡಿ.ಸಿ.ಶರತ್ ಬಿ. ತಿಳಿಸಿದ್ದಾರೆ.
ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ 15 ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಸೋಂಕಿತರ ಸಂಖ್ಯೆ ಕಲಬುರಗಿ ಜಿಲ್ಲೆಯಲ್ಲಿ 205 ಕ್ಕೆ ಏರಿಕೆಯಾಗಿದ್ದು, 123 ಸಕ್ರೀಯ ರೋಗಿಗಳಾಗಿದ್ದಾರೆ.