ರಾಷ್ಟ್ರ ರಾಜಕಾರಣಕ್ಕೆ ನೆಹರು ಕುಟುಂಬ ಮಾಡಿದ್ದೇನು?

ಸೋಮವಾರ, 27 ಮೇ 2019 (16:27 IST)
ಮಾಜಿ ಪ್ರಧಾನಿ ದಿ.ಪಂಡಿತ್ ಜವಾಹರ್ ಲಾಲ್‌ನೆಹರು ಅವರ 55 ನೇ ಪುಣ್ಯತಿಥಿ ಅಂಗವಾಗಿ ಅವರ ಕುರಿತು ಎಲ್ಲೆಡೆ ನಮನ, ಗೌರವ ವಂದನೆ ಸಲ್ಲಿಸಲಾಗಿದೆ.  

ಪುಣ್ಯತಿಥಿ ಪ್ರಯುಕ್ತ ನೆಹರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್. ಈ ವೇಳೆ ಮಾಜಿ ಸಚಿವೆ ರಾಣಿ ಸತೀಶ್‌ ಸೇರಿದಂತೆ‌ ಕೆಪಿಸಿಸಿ ಪದಾಧಿಕಾರಿಗಳು ಭಾಗಿಯಾಗಿದ್ರು.

ರಾಣಿ ಸತೀಶ್ ಹೇಳಿಕೆ ನೀಡಿದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿಯವರ ಬಲಗೈಯಾಗಿ ನೆಹರು ಹೋರಾಟ ಮಾಡಿದ್ದರು.
ಇಂತಹ ಸ್ಮರಣೆ ಅವರು ನಮ್ಮ ಬದುಕಿನುದ್ದಕ್ಕೂ ಇದ್ದಾರೆ ಎಂಬುದಕ್ಕೆ ಸಾಕ್ಷಿ. ನೆಹರು ಅವರ ಪಂಚವಾರ್ಷಿಕ ಯೋಜನೆ, ಪಂಚರಾಷ್ಟ್ರಗಳ ಒಕ್ಕೂಟ ರಚನೆ ಸೇರಿದಂತೆ ದೇಶಕ್ಕೆ ಸಂಘಟಿತ ಶಕ್ತಿ ತುಂಬಿದವರು. ನೆಹರುರವರ ಪ್ರಗತಿಯುತ ಪಂಚವಾರ್ಷಿಕ ಯೋಜನೆಯ ಸಾರ್ವಜನಿಕ ಉದ್ದಿಮೆಗಳ ಫಲದಿಂದಾಗಿ ಬೆಂಗಳೂರು ಇಂದು ಅಭಿವೃದ್ಧಿ ಹೊಂದುವಂತಾಗಿದೆ ಎಂದರು.

ಮಕ್ಕಳ ಪ್ರಗತಿಗೆ ನೆಹರು ಅವರ ಚಿಂತನೆ ಕಾರಣ. ರಾಷ್ಟ್ರ ರಾಜಕಾರಣಕ್ಕೆ ಅವರ ಕುಟುಂಬದ ಶ್ರೇಷ್ಠ ಕೊಡುಗೆ ಇದೆ. ಭಾರತ ದರ್ಶನ ಪುಸ್ತಕ ಮೂಲಕ ಅನೇಕ ಉತ್ತಮ ವಿಚಾರಗಳನ್ನು ದೇಶಕ್ಕೆ ಕೊಡುವ ಮೂಲಕ ಉತ್ತಮ ಸಾಹಿತಿ ಎನಿಸಿಕೊಂಡವರು. ಲೋಹಿಯಾ, ಅಂಬೇಡ್ಕರ್, ಮಾರ್ಕ್ಸ್ ವಾದ ಚಿಂತನೆಗಳನ್ನು ನೆಹರು ಅಳವಡಿಸಿಕೊಂಡಿದ್ದರು ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ