ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಪ್ರಜ್ವಲ್ ಹೇಳಿದ್ದೇನು?

ಮಂಗಳವಾರ, 26 ಮಾರ್ಚ್ 2019 (17:00 IST)
ಮಾಜಿ ಸಿಎಂ ಸಿದ್ದರಾಮಯ್ಯರನ್ನು ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಭೇಟಿ ಮಾಡಿದ್ದಾರೆ.

ಭೇಟಿ ಬಳಿಕ ಪ್ರಜ್ವಲ್ ರೇವಣ್ಣ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ನವರ ಆಶೀರ್ವಾದ ಪಡೆದುಕೊಂಡಿದ್ದೇನೆ. ಎಲ್ಲೆಲ್ಲಿ ಪ್ರಚಾರಕ್ಕೆ ಬರುತ್ತೇನೆ ಅಂತ ತಿಳಿಸಿದ್ದಾರೆ.

ನಾವು ಸಣ್ಣವರಿದ್ದಾಗಿಂದಲೂ ನಾನು ಸಿದ್ದರಾಮಯ್ಯನವರನ್ನು ನೋಡಿಕೊಂಡು ಬೆಳೆದವರು. ನಮ್ಮ ಮನೆಯವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಅವರನ್ನು ಭೇಟಿಯಾಗಿದ್ದೇನೆ ಎಂದರು.

ಕಣದಲ್ಲಿರುವ ಬಿಜೆಪಿಯ ಎ. ಮಂಜು ಬಗ್ಗೆ ನನಗಂತೂ ಭಯ ಇಲ್ಲ ಎಂದ ಅವರು, ನಾನು ಯಾವತ್ತಾದ್ರೂ ಎ. ಮಂಜು ವಿರುದ್ಧ ಮಾತನಾಡಿದ್ದು ಕೇಳಿದ್ದೀರಾ..? ಟೀಕೆಯ ರಾಜಕಾರಣ ಮಾಡೋದಿಲ್ಲ ಅಂದ್ರು.

ನಾಲ್ಕೈದ ನೂರು ರೂಪಾಯಿ ಕೊಟ್ಟರೆ ಜನ ಸೇರಿಸೋದು ದೊಡ್ಡದಲ್ಲ ಎಂದು ಪರೋಕ್ಷವಾಗಿ ಎ. ಮಂಜು ವಿರುದ್ಧ ಕುಟುಕಿದ ಅವರು, ಹಾಗೇನಾದರೂ ದುಡ್ಡು ಕೊಟ್ಟರೆ ನಾವು ಹಾಸನ ಜಿಲ್ಲೆ ತುಂಬ ಜನ ಸೇರಿಸ್ತೇವೆ ಎಂದ್ರು.

ಕಡೂರು, ಅರಕಲಗೂಡು, ಅರಸಿಕೆರೆ ಹಾಸನಕ್ಕೆ ಸಿದ್ದರಾಮಯ್ಯ ಪ್ರಚಾರಕ್ಕೆ ಬರ್ತೀನಿ ಅಂತ ಹೇಳಿದ್ದಾರೆ ಅಂತಾನೂ ಪ್ರಜ್ವಲ್ ಹೇಳಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ