ವಾಲ್ಮೀಕಿ ಮೀಸಲಾತಿ ಹೋರಾಟದ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಮಂಗಳವಾರ, 9 ಫೆಬ್ರವರಿ 2021 (11:25 IST)
ದಾವಣಗೆರೆ : ವಾಲ್ಮೀಕಿ ಮೀಸಲಾತಿ ಹೋರಾಟದ ಘೋಷಣೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ.7.5ಮೀಸಲಾತಿಗಾಗಿ ಹೋರಾಟದ ಘೋಷಣೆ ಮಾಡಲ್ಲ. ಮೀಸಲಾತಿ ಸಂಬಂಧ ಸಚಿವರ ಉಪಸಮಿತಿ ರಚನೆ. ಆ ಉಪಸಮಿತಿ ಸಭೆ ಸೇರಿ ವರದಿ ಕೊಡಬೇಕು. ವರದಿ ಕೊಡದೇ ಮೀಸಲಾತಿ ಹೆಚ್ಚಳ ಅಸಾಧ್ಯ. ಸಿಎಂ ಏನು ಹೇಳ್ತಾರೋ ನೋಡೋಣ ಎಂದು ಹೇಳಿದ್ದಾರೆ.

ಹಾಗೇ ಸಿದ್ದು ನೇತೃತ್ವದಲ್ಲಿ ‘ಹಿಂದ’ ಹೋರಾಟ ಇಲ್ಲ, ಅವರು ಅಹಿಂದ ಹೋರಾಟದಲ್ಲಿ ಗುರುತಿಸಿಕೊಂಡಿದ್ದಾರೆ. ಹೊಸದಾಗಿ ಹಿಂದ ಹೋರಾಟ ಅವಶ್ಯಕತೆ ಇಲ್ಲ. ಕಾಂಗ್ರೆಸ್ ನಿಂದ ಹೋರಾಟದ ಸೂಚನೆ ಇಲ್ಲ. ಕುರುಬರ ಎಸ್.ಟಿ ಮೀಸಲಾತಿ ಹೋರಾಟವೇ ಬೇರೆ. ಸಿದ್ದರಾಮಯ್ಯ ಅಹಿಂದ ಹೋರಾಟವೇ ಬೇರೆ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ