ಮೈಸೂರಿನ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಎಸ್.ಎಲ್.ಭೈರಪ್ಪ ಹೇಳಿದ್ದೇನು?

ಭಾನುವಾರ, 29 ಸೆಪ್ಟಂಬರ್ 2019 (12:28 IST)
ಮೈಸೂರು : ಇಂದಿನಿಂದ ಹತ್ತು ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿನ ದಸರಾ ಮಹೋತ್ಸವ 2019ಕ್ಕೆ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಚಾಲನೆ ನೀಡಿದ್ದಾರೆ.




ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ವಿಜ್ಞಾನಿಗಳೇ ದೇವರ ಬಗ್ಗೆ ಮಾತನಾಡುವ ಉಸಾಬರಿಗೆ ಹೋಗುವುದಿಲ್ಲ. ಅವರಿಗೇ ದೇವರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಆದರೆ, ನಮ್ಮ ಸಾಹಿತಿಗಳು ತಮಗೆ ಎಲ್ಲವೂ ಗೊತ್ತು ಎಂದು ಹೇಳುತ್ತಾರೆ, ಕೆಲವು ಸಾಹಿತಿಗಳು ದೇವರೇ ಇಲ್ಲ ಎನ್ನುತ್ತಾರೆ ಎಂದು ಹೇಳಿದ್ದಾರೆ.


ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10 ವರ್ಷದಿಂದ ಮಧ್ಯವಯಸ್ಸಿನವರೆಗಿನ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಇದಕ್ಕೆ ಅನೇಕ ಆಧುನಿಕ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದರು. ಋತುಮತಿಯಾದಾಗ ಆಫೀಸಿಗೆ ಹೋಗಿ ಕೆಲಸ ಮಾಡುವುದು ಬೇರೆ, ದೇವಸ್ಥಾನಕ್ಕೆ ಪ್ರವೇಶ ಮಾಡುವುದು ಬೇರೆ. ಆ ವ್ಯತ್ಯಾಸವನ್ನು ಮಹಿಳೆಯರು ತಿಳಿದುಕೊಳ್ಳಬೇಕು. ಈ ಬಗ್ಗೆ ಸುಪ್ರೀಂಕೋರ್ಟ್ ​ನಲ್ಲೂ ವಿಚಾರಣೆಯಾಗುವಂತಾಯಿತು. ಕೇರಳದ ಕಮ್ಯುನಿಸ್ಟ್​ ಗಳು ಮಹಿಳೆಯರನ್ನು ಬಲವಂತವಾಗಿ ಶಬರಿಮಲೆ ದೇವಸ್ಥಾನಕ್ಕೆ ನುಗ್ಗಿಸಿದರು. ಅದೆಲ್ಲ ಅವರವರ ನಂಬಿಕೆಗೆ ಬಿಟ್ಟಿದ್ದು ಎಂದು ಭೈರಪ್ಪ ಹೇಳಿದ್ದಾರೆ.


ಅಲ್ಲದೇ ಕಾಯಕ ನಿಷ್ಠೆ ಹಾಳು ಮಾಡಿದವರೇ ರಾಜಕಾರಣಿಗಳು ಎಂದು ವೇದಿಕೆಯ ಮೇಲಿರುವ ರಾಜಕಾರಣಿಗಳ ಮುಂದೆಯೇ ಎಸ್.ಎಲ್.ಭೈರಪ್ಪ ಆರೋಪ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ