ಬಿ.ಎಸ್.ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಹೇಳಿದ್ದೇನು?

ಶುಕ್ರವಾರ, 26 ಜುಲೈ 2019 (14:40 IST)

ಮೈತ್ರಿ ಸರಕಾರದ ಪಕ್ಷಗಳು ವಿಶ್ವಾಸಮತ ಸಾಬೀತು ಪಡಿಸೋದ್ರಲ್ಲಿ ವಿಫಲವಾದ ಬೆನ್ನಲ್ಲೇ ಬಿಜೆಪಿ ರಾಜಕೀಯ ಚಟುವಟಿಕೆ ತೀವ್ರಗೊಳಿಸಿದೆ.

ನೂತನ ಸರಕಾರ ರಚನೆಗೆ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದಾರೆ. ಆದರೆ ಯಡಿಯೂರಪ್ಪ ಮುಂದಿನ ಹೆಜ್ಜೆ ಅಷ್ಟಾಗಿ ಸಲೀಸಾಗಿಲ್ಲ ಅನ್ನೋದು ಬಹಿರಂಗ ಸತ್ಯ.

ಹೀಗಾಗಿ ಸದನದ ಅಂಕಿ – ಅಂಶಗಳನ್ನು ಅಳೆದು ತೂಗಿ, ತಾಳೆ ಹಾಕುತ್ತಿರುವ ಬಿಜೆಪಿ ಹೈಕಮಾಂಡ್ ಈ ಬಾರಿ ಕೆಲವು ಖಡಕ್ ಸೂಚನೆಯನ್ನು ಯಡಿಯೂರಪ್ಪ ಪಾಳೆಯಕ್ಕೆ ನೀಡಿದೆ.

ಈ ಮೊದಲು 55 ಗಂಟೆ ಸಿಎಂ ಆಗಿದ್ದಾಗ ಆದಂತಹ ಕಹಿ ಘಟನೆಯನ್ನು ಯಡಿಯೂರಪ್ಪ ಮರುಕಳಿಸಬಾರದು. ಇದರಿಂದ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಹೊಡೆತ ಬೀಳಲಿದೆ ಎನ್ನಲಾಗಿದೆ.

ಇನ್ನು, ವಿಧಾನಸಭೆಯಲ್ಲಿ ಅತೃಪ್ತ ಶಾಸಕರ ವಿಶ್ವಾಸ ಪಡೆದುಕೊಂಡು ವಿಶ್ವಾಸಮತ ಯಾಚನೆ ಮಾಡಿ ಅದರಲ್ಲಿ ಗೆಲುವು ಸಾಧಿಸಬೇಕೆಂದು ಬಿಜೆಪಿ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ ಎನ್ನಲಾಗಿದೆ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ