ಯಡಿಯೂರಪ್ಪ ಮತ್ತೆ ಸಿಎಂ; ಶೋಭಾ ಕರಂದ್ಲಾಜೆ ಫುಲ್ ಖುಷ್
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತೆ ರಾಜ್ಯದ ಮುಖ್ಯಮಂತ್ರಿಗುತ್ತಿರುವುದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಅದರಲ್ಲೂ ಬರ ಪರಿಸ್ಥಿತಿ ಹೆಚ್ಚಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ರೈತರ ಅಭಿವೃದ್ಧಿ ಮಾಡಿ ಅವರ ಕಷ್ಟ ಪರಿಹರಿಸುತ್ತಾರೆ.
ರೈತರು ಮಾತ್ರವಲ್ಲದೇ ನಾಡಿನ ಜನತೆಗೆ ಒಳ್ಳೆಯ ಆಡಳಿತ ನೀಡ್ತಾರೆ. ಹೀಗಂತ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಅತೃಪ್ತ ಶಾಸಕರು ಬಿಜೆಪಿಗೆ ಬಂದರೆ ಸ್ವಾಗತ ಕೋರೋದಾಗಿ ಹೇಳಿದ ಅವರು, ರಾಜೀನಾಮೆ ಅಂಗೀಕಾರದರೆ ಅಂತಹ ಶಾಸಕರನ್ನು ಬಿಜೆಪಿ ಮತ್ತೆ ಗೆಲ್ಲಿಸಲು ಯತ್ನ ನಡೆಸಲಿದೆ ಎಂದ್ರು.