ಕೇಂದ್ರ ಪರಿಶೀಲನಾ ತಂಡದ ಕಣ್ಣಿಗೆ ಕಂಡಿದ್ದು ಏನೇನು?

ಮಂಗಳವಾರ, 8 ಸೆಪ್ಟಂಬರ್ 2020 (23:49 IST)
ಕೇಂದ್ರ ಪರಿಶೀಲನಾ ತಂಡವು ರಾಜ್ಯದ ಹಲವೆಡೆ ಭೇಟಿ ನೀಡಿದೆ.

ಕೊಡಗು ಜಿಲ್ಲೆಯಲ್ಲಿ ಕಳೆದ ತಿಂಗಳು ಅತಿವೃಷ್ಟಿಯಿಂದ ಸಂಭವಿಸಿದ್ದ ಹಾನಿಯ ಪರಿಶೀಲನೆಗಾಗಿ ಕೇಂದ್ರ ಪರಿಶೀಲನಾ ತಂಡವು ಕೊಡಗಿಗೆ ಆಗಮಿಸಿದೆ.

ಕೂಡಗು ಸೈನಿಕ ಶಾಲೆಯ ಹೆಲಿಪ್ಟಾಡ್ ಗೆ ಬಂದಿಳಿದ ತಂಡದ ನೇತೖತ್ವವನ್ನು ಕೇಂದ್ರ ಗ್ರಹ ಮಂತ್ರಾಲಯದ  ಜಂಟಿ ಕಾಯ೯ದಶಿ೯ ಕೆ.ವಿ.ಪ್ರತಾಪ್ ವಹಿಸಿದ್ದು, ಕೇಂದ್ರ ವಿತ್ತ ಸಚಿವಾಲಯದ ಡಾ.ಭಾತೇ೯ಂದು ಕುಮಾರ್ ಸಿಂಗ್,  ಕೆ.ಎಸ್.ಡಿ.ಎಂ.ಎ.ಆಯುಕ್ತ ಮನೋಜ್ ರಂಜನ್  ತಂಡದ ಸದಸ್ಯರಾಗಿದ್ದಾರೆ.

ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕೇಂದ್ರ ತಂಡದ ಸದಸ್ಯರಿಗೆ ಜಿಲ್ಲೆಯಲ್ಲಿ ಮಹಾಮಳೆಯಿಂದ ಉಂಟಾದ ಭೂಕುಸಿತ ಮತ್ತು ಇತರ ಹಾನಿಯ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ.

ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮಕ್ಕೆ ಭೇಟಿ ನೀಡಿದ ತಂಡವು ಕಾಫಿ, ಕರಿಮೆಣಸು ಕೃಷಿ ಹಾನಿ ವೀಕ್ಷಿಸಿತು. ತಲಕಾವೇರಿಯಲ್ಲಿ ಭೂಕುಸಿತ ಉಂಟಾದ ಪ್ರದೇಶಕ್ಕೂ ಕೇಂದ್ರ ತಂಡ ತೆರಳಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ