ಆ ಕಾರಣಕ್ಕೆ ಯುವಕನಿಗೆ ಚಾಕು ಇರಿದ ಸಹೋದರರು
ಯುವಕನೊಬ್ಬನ ಮೇಲೆ ಸಹೋದರರು ಚಾಕುವಿನಿಂದ ಇರಿದ ಘಟನೆ ನಡೆದಿದೆ.
ಮುಸ್ತಾಕ್ ಅಲಿ ನದಾಫ್ (23) ಮೃತ ವ್ಯಕ್ತಿ. ದಾವಲಸಾಬ್ ಹಾಗೂ ಮಹ್ಮದ್ ಅಲಿ ಮಲ್ಲಾಡದ ಸಹೋದರರಿಂದ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.
ಕೌಟುಂಬಿಕ ಕಲಹ ಹಿನ್ನೆಲೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಮುಸ್ತಾಕ್ ಅಲಿ ಸಾವನ್ನಪ್ಪಿದ್ದಾರೆ. ಆರೋಪಿಗಳನ್ನು ಪೊಲಿಸರು ಬ೦ಧಿಸಿದ್ದಾರೆ.