ಜೀವದ ಹಂಗು ತೊರೆದ ಇವ್ರು ಮಾಡ್ತಿರೋದೇನು? ಶಾಕಿಂಗ್

ಸೋಮವಾರ, 6 ಮೇ 2019 (15:41 IST)
ಜೀವದ ಹಂಗು ತೊರೆದು ಯುವಕರು, ಮಹಿಳೆಯರು ಮಾಡುತ್ತಿರುವ ಕೆಲಸ ನೋಡಿದ್ರೆ ಎಂಥವರೂ ಒಂದು ಕ್ಷಣ ಗಾಬರಿಯಾಗಲೇಬೇಕು.

ಗುಟುಕು ನೀರಿಗಾಗಿ ಜೀವದ ಹಂಗು ತೊರೆದು ಬಾವಿಯಿಂದ ನೀರು ಸೇದುತ್ತಿದ್ದಾರೆ ಇಲ್ಲಿನ ಜನರು. ಬೀದರ್‌ ಜಿಲ್ಲೆ ಔರಾದ್ ತಾಲೂಕಿನ ಚಿಮ್ಮೆಗಾಂವ್ ಗ್ರಾಮದಲ್ಲಿನ ಜನರ ಪ್ರತಿದಿನದ ನರಕಯಾತನೆಯ ಸ್ಟೋರಿ ಇದು.  70 ರಿಂದ 80 ಕುಟುಂಬಗಳು ವಾಸವಾಗಿರುವ ಈ ಗ್ರಾಮದಲ್ಲಿ ಜಾನುವಾರಗಳು ಸೇರಿದಂತೆ ಮನುಷ್ಯ ಕುಲಕ್ಕೆ ನೀರಿನ ದಾಹ ತಣಿಸಲು ಇರುವುದು ಒಂದೇ ಬಾವಿ.

ಈ ಬಾವಿಯಿಂದ ಪ್ರತಿದಿನ ಒಂದು ಕೊಡ ನೀರಿಗಾಗಿ ಗ್ರಾಮಸ್ಥರು ಕಿತ್ತಾಡುವಂತಾಗಿದೆ. ಬಾವಿ ಮೇಲೆ ನಿಂತು ಜೀವದ ಹಂಗು ತೊರೆದು 50 ಅಡಿ ಆಳದ ಬಾವಿಯಿಂದ ನೀರು ಸೇದುತ್ತಿದ್ರೆ ಯಮನ ಲೋಕ ತಲುಪೋದು ಗ್ಯಾರೆಂಟಿ ಎನ್ನುವ ಭಯ ಗ್ರಾಮಸ್ಥರದ್ದಾಗಿದೆ.

ಭೀಕರ ಬರಗಾಲ ಎದುರಾದರೂ  ಗ್ರಾಮಸ್ಥರಿಗೆ ನೀರು ಕೊಡಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ಜನರು ದೂರುತ್ತಿದ್ದಾರೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ