ಏಡ್ಸ್ / ಹೆಚ್.ಐ.ವಿ ಸಂಬಂಧಿತ ಕಳಂಕ ಮತ್ತು ತಾರತಮ್ಯ ದೂರ ಮಾಡಬೇಕೆಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಹೆಚ್.ಐ.ವಿ ನಿಯಂತ್ರಣಕ್ಕಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ತ್ರೀ ಶಕ್ತಿ ಗುಂಪುಗಳ ಸಹಾಯ ಪಡೆದು ತರಬೇತಿ ನೀಡಿ ಹೆಚ್.ಐ.ವಿ ಕುರಿತು ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕು.
ಹೀಗಂತ ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಹೆಚ್.ಐ.ವಿ ಸಂಬಂಧಿತ ಕಳಂಕ ಮತ್ತು ತಾರತಮ್ಯ ದೂರ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ನಿರ್ವಹಿಸಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಹೆಚ್.ಐ.ವಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಹೆಚ್.ಐ.ವಿ ಸೋಂಕಿತ ಹಾಗೂ ಬಾಧಿತ ಮಕ್ಕಳಿಗೆ ವಿಶೇಷ ಪಾಲನಾ (ಕಾಬಾ) ಯೋಜನೆಯಡಿಯಲ್ಲಿ 0 ದಿಂದ 18ನೇ ವಯಸ್ಸಿನ ಮಕ್ಕಳಿಗೆ 1000 ರೂಗಳ ಧನಸಹಾಯವನ್ನು ವಿದ್ಯಾಭ್ಯಾಸ ಮತ್ತು ಪೌಷ್ಟಿಕ ಆಹಾರದ ನೆರವಿಗಾಗಿ ನೀಡಲಾಗುತ್ತಿದೆ ಎಂದರು.