ಒಕ್ಕಲಿಗರಿಗೆ ಮಾಜಿ ಸಿಎಂ ಖಡಕ್ಕಾಗಿ ಹೇಳಿದ್ದೇನು?

ಸೋಮವಾರ, 25 ಮಾರ್ಚ್ 2019 (18:31 IST)
ರಾಜಕೀಯ ಅಖಾಡದಲ್ಲಿ ತರಹೇವಾರಿ ಘಟನೆಗಳು ನಡೆಯುತ್ತಿದ್ದರೆ ಇದರ ನಡುವೆಯೂ ಜಾತಿಯೂ ಪ್ರಧಾನ ಪಾತ್ರ ವಹಿಸುತ್ತಿದೆ. ಇದನ್ನೇ ಕೆಲವು ಅಭ್ಯರ್ಥಿಗಳು ಬಹಿರಂಗವಾಗಿ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಎಂ.ವೀರಪ್ಪ ಮೊಯ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಒಕ್ಕಲಿಗರು ಅನ್ನೋ ಕಾರಣಕ್ಕೆ ಮತ ನೀಡಬೇಡಿ. ಹಾಗೊಂದು ವೇಳೆ ಮತ ನೀಡಿದರೆ ಅದೇ ಒಕ್ಕಲಿಗ ಜನಾಂಗದ ಸಿಎಂ ಕುಮಾರಸ್ವಾಮಿಗೆ ಮೈತ್ರಿ ಸರ್ಕಾರದಲ್ಲಿ ಅಪಾಯವಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕುಮಾರಸ್ವಾಮಿ ಅವರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಒಕ್ಕಲಿಗರು ಮತ ಚಲಾಯಿಸುವಂತೆ ಅವರು ಹೇಳಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕು ನಂದಿಗಿರಿ ಧಾಮದ ತಪ್ಪಲಿನ ಪಾರ್ಮ್ ಹೌಸ್ ನಲ್ಲಿ ಹೇಳಿಕೆ ನೀಡಿರುವ ಅವರು, ಮೈತ್ರಿ ಪಕ್ಷಗಳ ಮುಖಂಡರು ಚುನಾವಣೆಯಲ್ಲಿ ತೊಡಗಿಕೊಳ್ಳುವಂತೆ ಹೇಳಿದ್ರು. ಆದರೆ ಸುದ್ದಿಗೋಷ್ಠಿಗೆ ಜೆಡಿಎಸ್ ನಾಯಕರು ಗೈರು ಹಾಜರಾಗಿದ್ದರಿಂದಾಗಿ ಜೆಡಿಎಸ್ ಆಕ್ರೋಶ ಬಹಿರಂಗವಾದಂತಾಯಿತು. ಮೈತ್ರಿ ಸರ್ಕಾರ ಪತನವಾಗುವ ಎಚ್ಚರಿಕೆಯನ್ನು ವೀರಪ್ಪ ಮೊಯ್ಲಿ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ