ಕಾಲ್ ರಿಸೀವ್ ಮಾಡದ ಸಂಗಾತಿಗೆ ಯುವಕ ಮಾಡಿದ್ದೇನು?

ಮಂಗಳವಾರ, 17 ನವೆಂಬರ್ 2020 (06:39 IST)
ಮುಂಬೈ : 28 ವರ್ಷದ ಯುವಕನೊಬ್ಬ ತನ್ನ 25 ವರ್ಷದ ಸಂಗಾತಿಯ ಮೇಲೆ ಹಲ್ಲೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.

ಯುವಕ ಮತ್ತು ಸಂಗಾತಿಯ ನಡುವೆ ಸಂಬಂಧವಿತ್ತು, ಆದರೆ ಯುವಕ ಯಾವಾಗಲೂ ಮದ್ಯಪಾನ ಸೇವಿಸಿ ಸಂಗಾತಿಯ ಜೊತೆ ಜಗಳವಾಡುತ್ತಿದ್ದ, ಹಲ್ಲೆ ಕೂಡ ಮಾಡುತ್ತಿದ್ದ. ಇದರಿಂದ ಬೇಸತ್ತ ಸಂಗಾತಿ ಅವನನ್ನು ನಿರ್ಲಕ್ಷಿಸಲು ಶುರು ಮಾಡಿದ್ದಾಳೆ. ಆತನ ಕರೆಗಳನ್ನು ಸ್ವೀಕರಿಸಲಿಲ್ಲ. ಇದರಿಂದ ಕೋಪಗೊಂಡಿದ್ದ ಆತ ಆಕೆ ಭೇಟಿಯಾಗಲು ಬಂದಾಗ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ದಾದರ್ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ