ಅಪ್ರಾಪ್ತ ಬಾಲಕಿಗೆ ಯಡಿಯೂರಪ್ಪ ರೂಮಿಗೆ ಕರೆದೊಯ್ದು ಮಾಡಿದ್ದೇನು, ಚಾರ್ಜ್ ಶೀಟ್‌ನಲ್ಲಿದೆ ವಿವರ

Sampriya

ಗುರುವಾರ, 27 ಜೂನ್ 2024 (18:11 IST)
Photo Courtesy X
ಬೆಂಗಳೂರು: ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಯಡಿಯೂರಪ್ಪ  ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ಸಂಬಂಧ ಅಧಿಕಾರಿಗಳು ಕೋರ್ಟ್‌ಗೆ 750 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದರೆ.

ಚಾರ್ಜ್‌ಶೀಟ್‌ನಲ್ಲಿ ಬಿಎಸ್‌ವೈ ಹಳೇ ಕೇಸ್ ವಿಚಾರಿಸುತ್ತಾ ಬಾಲಕಿಯನ್ನು ರೂಮಿಗೆ ಕರೆದುಕೊಂಡು ಹೋಗಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿರುವ ಬಗ್ಗೆ ಸತ್ಯಾಂಶವಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಒಂದು ವೇಳೆ ಇದು ಕೋರ್ಟ್‌ನಲ್ಲಿ ಸಾಬೀತಾದರೆ ಬಿಎಸ್‌ವೈಗೆ ಶಿಕ್ಷೆಯಾಗಲಿದೆ. ‌

ಯಡಿಯೂರಪ್ಪ ಸೇರಿದಂತೆ ಅರುಣ್, ರುದ್ರೇಶ್ ಮತ್ತು ಮರಿಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನಿಡಿದ್ದಾರೆ ಎಂಬ ಆರೋಪದ ಮೇಲೆ ಸದಾಶಿವನಗರ ಠಾಣೆಯಲ್ಲಿ ಬಿಎಸ್‍ವೈ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಇನ್ನು ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ನೀಡಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ