ಸೇಂದಿ ಸೇವಿಸಿದವರ ಕಥೆ ಏನಾಯ್ತು?
ಸೇಂದಿ ಸೇವಿಸಿದರೆ ಮಜವಾಗಿರುತ್ತೆ ಅಂತ ನೀವು ಭಾವಿಸಿದ್ರೆ ಈ ಸುದ್ದಿ ಓದಲೇಬೇಕು.
ಕಲುಷಿತ ಸೇಂದಿ ಸೇವಿಸಿ 12 ಜನ ಕಾರ್ಮಿಕರು ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಆಂಧ್ರದ ಕಮ್ಮವಾರಪಳ್ಳಿ ಯಲ್ಲಿ ಸೇಂದಿ ಸೇವಿಸಿ ರಾಜ್ಯದ ಕಾರ್ಮಿಕರು ಅಸ್ವಸ್ಥರಾಗಿದ್ಧಾರೆ. ಅಸ್ವಸ್ಥರು ಬಾಗೇಪಲ್ಲಿ ತಾಲ್ಲೂಕಿನ ಗುಟ್ಟೆ ಪಾಳ್ಯ ನಿವಾಸಿಗಳಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಗ್ರಾಮದ ನಿವಾಸಿಗಳಾಗಿದ್ದು, ಅಸ್ವಸ್ಥರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಾಂತಿ ಭೇದಿಯಿಂದ ಬಾಗೇಪಲ್ಲಿ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಆಂಧ್ರದ ಅಮಡಗೂರು ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ.