ಅನೈತಿಕ ಸಂಬಂಧ ಹಾಗೂ ಅಕ್ರಮ ಸಂಬಂಧ ಕೊಡಬಾರದ ಫಲವನ್ನೇ ಕೊಡುತ್ತೆ ಅನ್ನೋದಕ್ಕೆ ಮತ್ತೊಂದು ನಿದರ್ಶನ ವರದಿಯಾಗಿದೆ.
ಸ್ವಂತ ಅಳಿಯನ ಜತೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಕ್ಕೆ ಅನೈತಿಕ ಸಂಬಂಧ ಬೆಳೆಸಿದ ಮಹಿಳೆಗೆ ಈ ಗತಿ ಬಂದಿದೆ.
ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯನ್ನು ಊರಿನ ಜನರ ಎದುರಲ್ಲೇ ಪಂಚಾಯಿತಿ ನಡೆಸಿ ತಲೆಕೂದಲು ಕತ್ತರಿಸಲಾಗಿದೆ.
ಪತಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಅಳಿಯನೊಂದಿಗೆ ಈ ಮಹಿಳೆ ಸಂಭೋಗ ನಡೆಸುತ್ತಿದ್ದಳು ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.
ಅನೈತಿಕ ಸಂಬಂಧ ಹೊಂದಿರೋ ಮಹಿಳೆಯ ಕೂದಲನ್ನು ಕತ್ತರಿಸುವಂತೆ ಪಂಚಾಯಿತಿ ತೀರ್ಮಾನ ನೀಡಿದೆ. ಹೀಗಾಗಿ ಮಹಿಳೆ ಈಗ ತನ್ನ ತಲೆ ಕೂದಲನ್ನು ಕಳೆದುಕೊಂಡಿದ್ದಾಳೆ.
ಜಾರ್ಖಂಡ್ ನ ಕೋಡೆರ್ಮಾದ ಡೆಂಗೋಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.