ಪತ್ನಿ ಶೀಲ ಶಂಕಿಸಿದ ಪತಿ ಮಾಡಿಕೊಂಡಿದ್ದೇನು?

ಶುಕ್ರವಾರ, 8 ಮಾರ್ಚ್ 2019 (18:38 IST)
ಪತಿ ಮಹಾಶಯನೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಆಕೆಗೆ ಮಾಡಬಾರದ್ದನ್ನು ಮಾಡಿ ಕೊನೆಗೆ ತಾನೂ ಅದೇ ಹಾದಿ ಹಿಡಿದಿದ್ದ ಘಟನೆ ನಡೆದಿದೆ.

ಪತ್ನಿ ಕೊಂದು, ಪತಿ ಆತ್ಮಹತ್ಯೆಗೆ ಯತ್ನ ನಡೆಸಿರುವ ಘಟನೆ ನಡೆದಿದೆ. ಶೀಲ ಶಂಕಿಸಿ ಪತ್ನಿಯ ಬರ್ಬರ ಹತ್ಯೆ ಮಾಡಲಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಯ ಗರಿಬಿ ಕಾಲೋನಿಯಲ್ಲಿ ಘಟನೆ ನಡೆದಿದೆ.

ಉಮಾ(30) ಕೊಲೆಯಾದ ದುರ್ದೈವಿಯಾಗಿದ್ದಾಳೆ. ನಾಗೇಶ್(35) ತನ್ನ ಪತ್ನಿ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ. ಕಳೆದ ಆರು ವರ್ಷದ ಹಿಂದೆ ಉಮಾ-ನಾಗೇಶ್ ವಿವಾಹವಾಗಿದ್ದರು.

ಇಬ್ಬರು ಮಕ್ಕಳು ಹೊಂದಿದ್ದ ದಂಪತಿ ನಡುವೆ ಅನುಮಾನ ಶುರುವಾಗಿದೆ. ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆದು ಶಂಕೆ ವ್ಯಕ್ತಪಡಿಸಿದ ನಾಗೇಶ್ ಇದೇ ವಿಚಾರಕ್ಕೆ ನಿತ್ಯ ಜಗಳ ತೆಗೆಯುತ್ತಿದ್ದ. ಮುಂಜಾನೆ ಪತ್ನಿಯ ಕತ್ತು ಕೂಯ್ದು ಬರ್ಬರ ಹತ್ಯೆ ಮಾಡಿದ್ದಾನೆ.

ಬಳಿಕ ತಾನೂ ಕತ್ತು ಕೂಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ನಾಗೇಶ್ ರನ್ನ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ