ಮೋದಿ ಮೆಟ್ರೋ ಅಜೆಂಡಾ ಏನು?

ಮಂಗಳವಾರ, 21 ಮಾರ್ಚ್ 2023 (10:21 IST)
ಬೆಂಗಳೂರು ನಗರದಲ್ಲಿ ಒಟ್ಟು 32 ವಿಧಾನಸಭಾ ಕ್ಷೇತ್ರಗಳಿವೆ. 2018ರ ಚುನಾವಣೆಯಲ್ಲಿ ಜೆಡಿಎಸ್ 4, ಕಾಂಗ್ರೆಸ್ 17, ಬಿಜೆಪಿ 11 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಕಾರಣಕ್ಕೆ ಈ ಬಾರಿಯ ಚುನಾವಣೆಯಲ್ಲಿ ಅಮಿತ್ ಶಾ 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಟಾಸ್ಕ್ ನೀಡಿದ್ದರು.  
 
ಅಮಿತ್ ಶಾ ಟಾಸ್ಕ್ ನೀಡಿ ತಿಂಗಳಾದ್ರೂ ದೊಡ್ಡ ಮಟ್ಟದಲ್ಲಿ ಕಾರ್ಯಗತವಾಗದ ಹಿನ್ನೆಲೆಯಲ್ಲಿ ಈಗ ಅಭಿವೃದ್ಧಿ ಅಜೆಂಡಾವನ್ನು ಇಟ್ಟುಕೊಂಡು ಬ್ರ್ಯಾಂಡ್ ಬೆಂಗಳೂರು ಕನಸು ಬಿತ್ತಲು ಬಿಜೆಪಿ ಮುಂದಾಗಿದೆ. ಈ ಕಾರಣಕ್ಕೆ ವೈಟ್ಫೀಲ್ಡ್ – ಕೆ.ಆರ್.ಪುರ ಮೆಟ್ರೋ ಲೈನ್ ಉದ್ಘಾಟನೆ ಮೂಲಕ ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿ ಮಂತ್ರವನ್ನು ಮೋದಿ ಪಠಿಸಲಿದ್ದಾರೆ.

ಈ ಸಂದರ್ಭದಲ್ಲೇ ರೋಡ್ ಶೋ ನಡೆಸಲು ಮೋದಿ ಮುಂದಾಗಿದ್ದು, ಈ ಮೂಲಕ ಮಿಷನ್ ಬೆಂಗಳೂರು ಟಾರ್ಗೆಟ್ನಡಿ ಮತ ಬೇಟೆ ಮಾಡಲಿದ್ದಾರೆ. ಬೆಂಗಳೂರು ನಗರದ 28, ಗ್ರಾಮಾಂತರ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಮೋದಿ ಹವಾ ಸೃಷ್ಟಿಗೆ ಪ್ಲ್ಯಾನ್ ರೂಪಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ