ಮದುವೆಯಾಗಿ ಮೂರೇ ದಿನಕ್ಕೆ ಪರಾರಿ !?

ಶುಕ್ರವಾರ, 17 ಮಾರ್ಚ್ 2023 (10:22 IST)
ಬೆಂಗಳೂರು : ಮದುವೆಯಾಗಿ ಮೂರೇ ದಿನಕ್ಕೆ ಪತಿ ಪರಾರಿಯಾಗಿದ್ದು ಎಂದು ಆರೋಪಿಸಿ ಪತ್ನಿ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
 
ಧರಣಿ ಹಾಗೂ ಸುರೇಶ್ ಇಬ್ಬರು ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು ಫೆ.15ರಂದು ಇಬ್ಬರು ಮದುವೆಯೂ ಆಗಿದ್ದರು. ಆದರೆ ಮದುವೆಯಾಗಿ ಮೂರೇ ದಿನಕ್ಕೆ ಪತಿ ಸುರೇಶ್ ಇದ್ದಕ್ಕಿದ್ದಂತೆ ಪರಾರಿಯಾಗಿದ್ದಾನೆ ಎಂದು ಆರೋಪಿಸಿ ಧರಣಿ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಪ್ರಾರಂಭಿಸಿದ್ದಾರೆ. ಈ ವೇಳೆ ಸುರೇಶ್ನನ್ನು ವಿಚಾರಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿ, ನಾನು ಧರಣಿಯನ್ನು ಮದುವೆಯಾಗಿಲ್ಲ. ನಾವಿಬ್ಬರು ಸ್ನೇಹಿತರಾಗಿದ್ದೆವು. ಅದು ಶಾರ್ಟ್ ಮೂವಿಗಾಗಿ ತೆಗೆದ ಫೋಟೋ ಆಗಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ