ಬೆಂಗಳೂರು: ದಯವಿಟ್ಟು ಅರ್ಥ ಮಾಡ್ಕೊಳ್ಳಿ.. ರಾಜಕೀಯ, ಪ್ರಜಾಕೀಯ ಬೇರೆ ಬೇರೆನೇ.. ಎಂದು ನಟ ಉಪೇಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ.
ಹಾಗಿದ್ದರೆ ಉಪೇಂದ್ರ ಹೇಳುವ ಪ್ರಜಾಕೀಯ ಎಂದರೇನು?
ಇಲ್ಲಿ ಪ್ರಜೆಗಳೇ ಎಲ್ಲವನ್ನೂ ನಿರ್ಧಾರ ಮಾಡುತ್ತಾರೆ. ಜನ ನಾಯಕರಲ್ಲ. ಉದಾಹರಣೆಗೆ ಒಬ್ಬ ಪೊಲೀಸ್ ಅಧಿಕಾರಿ ವರ್ಗಾವಣೆ ಆಗಬೇಕು ಎಂದರೆ ಜನರೇ ನೇರವಾಗಿ ನಿರ್ಧರಿಸಬೇಕು. ಅವರಿಗೇ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಧಿಕಾರ ಇರಬೇಕು. ಇಲ್ಲಿ ಯಾರೂ ನಾಯಕರಿಲ್ಲ. ಜನ ಸಾಮಾನ್ಯರೇ ತಮಗೆ ಏನು ಬೇಕು ಎನ್ನುವುದನ್ನು ನಿರ್ಧರಿಸಬೇಕು.
ಹೀಗೆಂದು ಉಪೇಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗಿದ್ದರೆ ಇದೆಲ್ಲಾ ನನಸಾಗೋದು ಯಾವಾಗ? ಇವತ್ತಿಂದಲೇ ಕೆಲಸ ಶುರು ಮಾಡಿದ್ದೇವೆ. ಸುಮಾರು 200 ಕ್ಕೂ ಹೆಚ್ಚು ಜನ ಅಭ್ಯರ್ಥಿಗಳು ನಮ್ಮಲ್ಲಿ ರೆಡಿ ಇದ್ದಾರೆ. ಶೀಘ್ರದಲ್ಲೇ ಹೊಸ ಪಕ್ಷ ಸ್ಥಾಪನೆಯೊಂದಿಗೆ ನಿಮ್ಮ ಮುಂದೆ ಬರುತ್ತೇವೆ ಎಂದು ಉಪೇಂದ್ರ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ