ರಾಜಕೀಯದಲ್ಲಿ ಹೊಸ ಕ್ರಾಂತಿ ಮಾಡಲು ಹೊರಟಿದ್ದ ಉಪೇಂದ್ರಗೆ ಸಿಕ್ಕಿದೆ ಶಾಕ್

ಸೋಮವಾರ, 5 ಮಾರ್ಚ್ 2018 (16:28 IST)
ಬೆಂಗಳೂರು: ರಾಜಕೀಯದಲ್ಲಿ ಹೊಸ ಕ್ರಾಂತಿ ಮಾಡಲು ಪ್ರಜಾಕೀಯ ಎಂಬ ಹೊಸ ಕಲ್ಪನೆಯೊಂದಿಗೆ ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ್ದ ಉಪೇಂದ್ರ ಇದೀಗ ತಮ್ಮದೇ ಪಕ್ಷದಿಂದ ಹೊರಬರುವ ಸುಳಿವು ಕೊಟ್ಟಿದ್ದಾರೆ.

ಕೆಪಿಜೆಪಿ ಎಂಬ ಪಕ್ಷ ಸ್ಥಾಪಿಸಿದ್ದ ಮಹೇಶ್ ಗೌಡ ಮತ್ತು ಉಪೇಂದ್ರ ನಡುವೆ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು ಉಪೇಂದ್ರ ಪಕ್ಷದಿಂದಲೇ ಹೊರ ಬರುವ ಸ್ಥಿತಿಗೆ ತಲುಪಿದ್ದಾರೆ. ಇದು ಹೊಸ ರಾಜಕೀಯ ಅಲೆ ಏಳಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ತಂದಿದೆ.

ಇನ್ನೇನು ಚುನಾವಣೆ ಹತ್ತಿರ ಬರುತ್ತಿದೆ ಎನ್ನುವಾಗ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ವಿಚಾರದಲ್ಲಿ ಮಹೇಶ್ ಗೌಡ ಮತ್ತು ಉಪೇಂದ್ರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗಿದೆ. ಉಪೇಂದ್ರ ಹೇಳುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಠೇವಣಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಮಹೇಶ್ ಗೌಡ ದೂರು. ಆದರೆ ನನ್ನ ರಾಜಕೀಯ ಪರಿಕಲ್ಪನೆಯೇ ಇದು. ಇದೇ ದಾರಿಯಲ್ಲಿ ಸಾಗಬೇಕು ಎನ್ನುವುದು ಉಪೇಂದ್ರ ವಾದ.

ಇದೀಗ ಇವರಿಬ್ಬರ ವಾದ ವಿವಾದ ತಾರಕಕ್ಕೇರಿದ್ದು, ನಾಳೆ ಉಪೇಂದ್ರ ತಮ್ಮ ಭವಿಷ್ಯದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ತಮ್ಮ ಪರಿಕಲ್ಪನೆಗೆ ಸಾಥ್ ಸಿಗದೇ ಉಪೇಂದ್ರ ನಿರಾಸೆಗೊಳಗಾಗಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ