ಸ್ಮಾರಕಕ್ಕೆ ವಿಶೇಷ ದೀಪಾಲಂಕಾರ ವಿಶೇಷತೆ ಏನು?

ಸೋಮವಾರ, 31 ಜನವರಿ 2022 (08:40 IST)
ಬೀದರ್ : ಉಷ್ಣವಲಯದ ನಿರ್ಲಕ್ಷಿತ ರೋಗಗಳ ದಿನ(ಎನ್ಟಿಡಿ) ಹಿನ್ನೆಲೆಯಲ್ಲಿ ಭಾನುವಾರ ಗಡಿ ಜಿಲ್ಲೆ ಬೀದರ್ನ ಐತಿಹಾಸಿಕ ಸ್ಮಾರಕಕ್ಕೆ ಗುಲಾಬಿ ಮತ್ತು ಕೇಸರಿ ಬಣ್ಣಗಳ ದೀಪ ಅಳವಡಿಸಿ ಆಚರಣೆ ಮಾಡಲಾಯಿತು.
ಆನೇಕಾಲು ರೋಗ ಸೇರಿದಂತೆ ನಿರ್ಲಕ್ಷಿತ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೀದರ್ನ ಓಲ್ಡ್ ಸಿಟಿಯಲ್ಲಿರುವ ಐತಿಹಾಸಿಕ ಚೌಬಾರ್ ಕಮಾನ್ಗೆ ಗುಲಾಬಿ ಮತ್ತು ಕೇಸರಿ ದೀಪ ಅಳವಡಿಸಿ ಎನ್ಟಿಡಿ ಅಚರಣೆ ಮಾಡಲಾಯಿತು.

ಬೀದರ್ ತಹಶಿಲ್ದಾರ್ ಕಚೇರಿಗೂ ಗುಲಾಬಿ ಮತ್ತು ಕಿತ್ತಳೆ ಬಣ್ಣದಿಂದ ದೀಪಾಲಂಕಾರ ಮಾಡಲಾಗಿದ್ದು, ವಿಶೇಷವಾಗಿ ಜನರ ಗಮನ ಸೆಳೆಯುವಂತೆ ಎನ್ಟಿಡಿ ಆಚರಣೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ