ಹಳ್ಳಿಯಲ್ಲಿ ಪಾದಯಾತ್ರೆ ನಡೆಸಿದ ಸಚಿವ ಮಾಡಿದ್ದೇನು?

ಗುರುವಾರ, 13 ಜೂನ್ 2019 (18:12 IST)
ಸದಾ ವಿವಾದದಲ್ಲಿರುವ ಸಚಿವ ಈಗ ಹಳ್ಳಿಯಲ್ಲಿ ಪಾದಯಾತ್ರೆ ನಡೆಸೋ ಮೂಲಕ ಗಮನ ಸೆಳೆದಿದ್ದಾರೆ.

ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಶೀಳನೆರೆ ಹೋಬಳಿಯ ನವಿಲುಮಾರನಹಳ್ಳಿ ಗ್ರಾಮಕ್ಕೆ ಸಚಿವ ಸಿ.ಎಸ್.ಪುಟ್ಟರಾಜು ಭೇಟಿ ನೀಡಿ ಸಮಸ್ಯೆಗಳ ಅವಲೋಕನ ನಡೆಸಿದ್ರು.

ತಹಶೀಲ್ದಾರ್ ಶಿವಮೂರ್ತಿ ಮತ್ತು ಜಿಲ್ಲಾ ಪಂಚಾಯತಿ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು ಅವರೊಂದಿಗೆ ಪಾದಯಾತ್ರೆ ನಡೆಸಿ ಗ್ರಾಮಸ್ಥರ ಕಷ್ಟಸುಖ ಆಲಿಸಿದರು ಸಚಿವರು.

ಕಳೆದ 12 ವರ್ಷಗಳ ಹಿಂದೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯ ಮಾಡಿದ್ದ ನವಿಲುಮಾರನಹಳ್ಳಿ ಗ್ರಾಮ. ಮುಖ್ಯ ಮಂತ್ರಿಗಳು ಗ್ರಾಮವಾಸ್ತವ್ಯ ಮಾಡಿದ್ದ ಗ್ರಾಮದ ಮಾಯಿಗೌಡ ಸಚಿವರೊಂದಿಗೆ ಮಾತನಾಡಿ, ಮುಖ್ಯಮಂತ್ರಿಗಳು ನಮ್ಮ ಊರಿಗೆ ಬಂದಿದ್ದು ನಮ್ಮೂರಿನ ಭಾಗ್ಯದ ಬಾಗಿಲು ತೆರೆದಿದೆ. ಗ್ರಾಮವು ಸಮಗ್ರವಾದ ಅಭಿವೃದ್ಧಿಯನ್ನು ಕಂಡಿದೆ. ಆದರೆ ಕೆಲವು ಪತ್ರಿಕೆಗಳಲ್ಲಿ ನಿರಾಧಾರವಾದ ಸುಳ್ಳು ಸುದ್ಧಿಗಳು ವರದಿಯಾಗಿವೆ. .ಇವೆಲ್ಲವೂ ನಿರಾಧಾರವಾಗಿವೆ ಎಂದು ತಿಳಿಸಿದರು.  

ಗ್ರಾಮಸ್ಥರು ಪತ್ರಿಕೆಗಳಲ್ಲಿ ಸುಳ್ಳುಸುದ್ದಿಗಳು ಪ್ರಕಟವಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಕ್ಕೆ ಪಡಿತರ ವಿತರಣೆ ಮಾಡಲು ಸರ್ಕಾರಿ ನ್ಯಾಯಬೆಲೆ ಅಂಗಡಿಯ ಸ್ಥಾಪನೆ, ಅಗತ್ಯವಾದ ಚರಂಡಿಗಳ ನಿರ್ಮಾಣ ಹಾಗೂ ಊರಿನ ಕೆರೆಗೆ ಹರಳಹಳ್ಳಿ ಏತನೀರಾವರಿ ಯೋಜನೆಯ ಮೂಲಕ ನೀರು ತುಂಬಿಸಲು ಅಗತ್ಯಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು. ‌ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು ಸಾರ್ವಜನಿಕರೊಂದಿಗೆ ಚಹಾ ಕುಡಿದು ಕುಶಲೋಪರಿ ವಿಚಾರಿಸಿದರು.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ