ನಡು ರಸ್ತೆಯಲ್ಲಿ ನಾಗರಹಾವು ಮಾಡಿದ್ದೇನು?
ಮನೆಯೊಂದರಲ್ಲಿ ಸೇರಿಕೊಂಡಿದ್ದ ನಾಗರಹಾವೊಂದು ನಡುರಸ್ತೆಗೆ ಬಂದ ಘಟನೆ ನಡೆದಿದೆ.
ನಡು ರಸ್ತೆಯಲ್ಲೇ 14 ಮೊಟ್ಟೆಯಿಟ್ಟ ನಾಗರಹಾವು ಜನರ ಗಮನ ಸೆಳೆಯಿತು. ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಶಿಕ್ಷಕರ ಬಡಾವಣೆಯಲ್ಲಿ ಇರುವ ರವಿ ಎಂಬುವವರ ಮನೆಯ ಆವರಣದಲ್ಲಿ ಹಾವು ಸೇರಿಕೊಂಡಿತ್ತು.
ರವಿ ಅವರ ಮಾಹಿತಿ ಮೇರೆಗೆ ಉರಗ ತಜ್ಞ ಪ್ರಸನ್ನಕುಮಾರ್ ಹಾವು ರಕ್ಷಣೆ ಮಾಡಿದ್ರು. ಈ ವೇಳೆ ಮೊಟ್ಟೆಯಿಡಲು ಶುರು ಮಾಡಿದ ನಾಗರಹಾವು ಬರೋಬ್ಬರಿ ಒಟ್ಟು 14 ಮೊಟ್ಟೆಯಿಟ್ಟಿತು. ಹಾವನ್ನು ರಕ್ಷಿಸಿ ಬೇರೆಡೆ ಬಿಟ್ಟ ಮನ ಪ್ರಸನ್ನಕುಮಾರ್, ನಂತರ ಮೊಟ್ಟೆಗಳನ್ನೂ ರಕ್ಷಣೆ ಮಾಡಿದರು.