ಮೊಟ್ಟೆ ಪ್ರೀಯರಿಗಾಗಿ ಆಮ್ಲೇಟ್ ಬೈಟ್ಸ್

ಬುಧವಾರ, 13 ಫೆಬ್ರವರಿ 2019 (13:49 IST)
ಒಂದು ಬೌಲ್‌ನಲ್ಲಿ ನಾಲ್ಕು ಮೊಟ್ಟೆಯನ್ನು ತೆಗೆದುಕೊಳ್ಳಿ ಅದಕ್ಕೆ ಅಚ್ಚಕಾರದ ಪುಡಿಯನ್ನು ಹಾಕಿ ಚೆನ್ನಾಗಿ ಕಲಿಸಿಕೊಳ್ಳಿ ನಂತರ ಒಂದು ಚಿಕ್ಕದಾದ ಪ್ಯಾನ್ ಅನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಎಣ್ಣೆಯನ್ನು ಹಾಕಿಕೊಳ್ಳಿ ತದನಂತರ ಅದಕ್ಕೆ ಸ್ವಲ್ಪ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ. 

ಅದಕ್ಕೆ ಚಿಕ್ಕದಾಗಿ ಹೆಚ್ಚಿರುವ ಶುಂಟಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ ನಂತರ ನಿಮಗಿಷ್ಚಟವಾಗಿರುವ ತರಕಾರಿಯನ್ನು ಹಾಕಿಕೊಳ್ಳಿ ಉದಾಹರಣೆಗೆ ಟೊಮೇಟೊ, ಕ್ಯಾರೇಟ್, ಕ್ಯಾಪ್ಸಿಕಮ್ ಇಲ್ಲವೇ ಬಟಾಣಿ ಆದಷ್ಟು ಬೇಗನೆ ಬೇಯುವಂತಹ ತರಕಾರಿಗಳಾಗಿದ್ದರೆ ಉತ್ತಮ ಅದು ಚಿಕ್ಕದಾಗಿ ಹೆಚ್ಚಿಕೊಂಡಿರುವುದಾಗಿರಬೇಕು. ಅದನ್ನು 2 ನಿಮಿಷಗಳ ಕಾಲ ಹುರಿಯಿರಿ ಅದು ಸ್ವಲ್ಪ ಹಸಿಯಾಗಿದ್ದರೆ ಇನ್ನು ರುಚಿಕರವಾಗಿರುತ್ತದೆ ಅದಕ್ಕೆ ಸ್ವಲ್ಪ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಕಲಿಸಿರಿ. 
 
ನಂತರ ಅದನ್ನು ಮೊದಲೇ ಕಲಿಸಿರುವ ಮೊಟ್ಟೆಯ ಮಿಶ್ರಣಕ್ಕೆ ಅದನ್ನು ಹಾಕಿಕೊಳ್ಳಿ ನಂತರ ಅದನ್ನು ಚೆನ್ನಾಗಿ ಕಲಿಸಿ ಅದಕ್ಕೆ ಬೇಕಾದಲ್ಲಿ ಸ್ವಲ್ಪ ಉಪ್ಪನ್ನು ಸೇರಿಸಿಕೊಳ್ಳಬಹುದು ಅದನ್ನು ಪಡ್ಡು ತಯಾರಿಸುವ ಪ್ಯಾನ್ ಅನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿಕೊಂಡು ಅದರಲ್ಲಿ ಸ್ವಲ್ಪವೇ ಮಿಶ್ರಣ ಮಾಡಿರುವ ಮೊಟ್ಟೆಯನ್ನು ಹಾಕಿ ಅದು ಬೆಂದ ಮೇಲೆ ಅದನ್ನು ಚಮಚದ ಸಹಾಯದಿಂದ ತಿರುಗಿಸಿ ಮತ್ತೆ ಸ್ವಲ್ಪ ಬೇಯಿಸಿದರೆ ರುಚಿಕರವಾದ ಆಮ್ಲೇಟ್ ಬೈಟ್ಸ್ ಸವಿಯಲು ಸಿದ್ಧ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ