ತುಂಬೆ ವೆಂಟೆಡ್ ಡ್ಯಾಂಗೆ ಏನಾಗಿದೆ?

ಭಾನುವಾರ, 28 ಏಪ್ರಿಲ್ 2019 (15:09 IST)
ತುಂಬೆ ವೆಂಟೆಡ್ ಡ್ಯಾಂ ನೋಡಲು, ಸಚಿವರು, ಶಾಸಕರು, ಅಧಿಕಾರಿಗಳು ದೌಡಾಯಿಸಿದ್ದಾರೆ.

ಸಚಿವ ಯು.ಟಿ. ಖಾದರ್, ಎಂಎಲ್ ಸಿ ಐವನ್ ಡಿಸೋಜಾ, ಮಾಜಿ ಶಾಸಕ ಜೆ.ಆರ್.ಲೋಬೋ ಮತ್ತಿತರರು
ತುಂಬೆ ಡ್ಯಾಂನ ನೀರಿನ ಮಟ್ಟ ವೀಕ್ಷಿಸಿದರು.

ಮಂಗಳೂರಿಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚನೆಯನ್ನು ನೀಡಿದ್ರು. ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ತುಂಬೆ ಡ್ಯಾಂ ನೀರಿನ ಮಟ್ಟ ಕಡಿಮೆಯಾಗಿದೆ.

ದ.ಕ.ಜಿಲ್ಲಾಡಳಿತ, ಶಾಸಕರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಿದ್ರು. ತಾಲೂಕು ಮಟ್ಟದಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಅನುದಾನ ಇಡಲಾಗಿದೆ. ಜನರಿಗೆ ನೀರಿನ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ನೀತಿ ಸಂಹಿತೆ ಇರುವುದರಿಂದ ನಮ್ಮ ಕಾರ್ಯ ವಿಳಂಬವಾಗಬಹುದು. ಎಲ್ಲಿ ಅನಿವಾರ್ಯತೆ ಇದೆ ಅಲ್ಲಿ ಬೋರ್ ವೆಲ್ ವ್ಯವಸ್ಥೆ ಮಾಡಬೇಕು.

ಟ್ಯಾಂಕರ್ ಮೂಲಕ ಹಳ್ಳಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದರು. ಕಳೆದ ಸಲ ಮಡಿಕೇರಿಯಲ್ಲಿ ಅವಘಡ ಉಂಟಾಗಿತ್ತು. ಸಂಪಾಜೆ ಭಾಗದ ಜನರಿಗೆ ಜಾಗೃತೆಯಿಂದ ಇರಬೇಕೆಂದು ತುಂಬೆಯಲ್ಲಿ ಸಚಿವ ಯು.ಟಿ. ಖಾದರ್ ಹೇಳಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ