ಕೃಷ್ಣೆಗೆ ಹರಿದು ಬಂದ ಜೀವಜಲ: ಜನರು ಮಹಾ ಖುಷ್

ಭಾನುವಾರ, 28 ಏಪ್ರಿಲ್ 2019 (15:02 IST)
ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಹರಿದು ಬಂದಿರುವುದು ಗಡಿ ಪ್ರದೇಶದ ಜನರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. 

ಮಹಾರಾಷ್ಟ್ರದ ನೀರು ರಾಜ್ಯದ ಚಿಕ್ಕೋಡಿ, ಅಥಣಿ, ರಾಯಭಾಗದಲ್ಲಿ ಹಾಯ್ದು ಹೋಗಿರುವ ಕೃಷ್ಣಾ ನದಿಗೆ ಹರಿಬಿಡಲಾಗಿದೆ.

ಬಿಸಿಲಿನ ತಾಪಕ್ಕೆ ಒಂದು ತಿಂಗಳಿಂದ ನೀರಿಲ್ಲದೇ ಬತ್ತಿದ್ದ ಕೃಷ್ಣೆ ಮತ್ತೆ ಮೈ ತುಂಬಿಕೊಂಡಿದ್ದಾಳೆ. ಇಂದು ಬೆಳಿಗ್ಗೆಯಿಂದ ಹರಿದು ಬರುತ್ತಿರುವ ನೀರನ್ನು ನೋಡಿ ಜನರು ಖುಷ್ ಆಗಿದ್ದಾರೆ.

ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಜನರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ನೀರಿಲ್ಲದೇ ಕಂಗಾಲಾದ ಜನರಿಗೆ ಕೃಷ್ಣೆ ಈಗ ಮತ್ತೆ ವರವಾಗಿದ್ದಾಳೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ