ಸಿದ್ದಗಂಗಾ ಶ್ರೀಗಳ ಕೊನೆ ಆಸೆ ಏನಾಗಿತ್ತು?

ಸೋಮವಾರ, 21 ಜನವರಿ 2019 (18:30 IST)
ನಡೆದಾಡುವ ದೇವರು ಎಂದೇ ಕರೆಯಲ್ಪಡುತ್ತಿದ್ದ ತುಮಕೂರು ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಕಾರಣ ಇಡೀ ಕನ್ನಡ ನಾಡೇ ಕಣ್ಣೀರಿನಲ್ಲಿ ಮುಳುಗಿದೆ.

ಶ್ರೀಗಳು ದೈವಾಧೀನರಾಗುವ ಮುನ್ನ ಈ ಮೊದಲೇ ತಮ್ಮ ಕೊನೆಯ ಆಸೆಯನ್ನು ಹೇಳಿಕೊಂಡಿದ್ದರು. ಕಿರಿಯ ಶ್ರೀಗಳೊಂದಿಗೆ ಕೊನೆಯ ಆಸೆ ಹೇಳಿಕೊಂಡಿದ್ದರು.

ನಾನು ಯಾವಾಗ ಸತ್ತರೂ ಸರಿಯೇ, ಮಧ್ಯಾಹ್ನದ ದಾಸೋಹವನ್ನು ಮಕ್ಕಳು ಸ್ವೀಕರಿಸಿದ ನಂತರವಷ್ಟೇ ವಿಷಯ ತಿಳಿಸಬೇಕು. ಹೀಗಂತ ತಮ್ಮ ಆಸೆಯನ್ನು ಹೇಳಿಕೊಂಡಿದ್ದರಂತೆ. ಅದಕ್ಕಾಗಿಯೇ ಸ್ವಾಮಿಗಳು 11.44 ಕ್ಕೆ ನಿಧನರಾಗಿದ್ದರೂ ಕೂಡ ಮಧ್ಯಾಹ್ನದ ವರೆಗೆ ವಿಷಯ ತಿಳಿಸಲಿಲ್ಲ. ಮಧ್ಯಾಹ್ನದ ದಾಸೋಹವನ್ನು ಮಕ್ಕಳು ಸ್ವೀಕರಿಸಿದ ಬಳಿಕವಷ್ಟೇ ಸ್ವಾಮಿಗಳು ಶಿವೈಕ್ಯರಾದ ವಿಷಯವನ್ನು ತಿಳಿಸಲಾಗಿದೆ. ಸಾವಿನಲ್ಲಿಯೂ ಕೂಡ ಯಾರೂ ಹಸಿದುಕೊಂಡಿರಬಾರದು ಎಂಬ ಕಲ್ಪನೆಯನ್ನು ಶ್ರೀಗಳು ಹೊಂದಿದ್ದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ