ಹೆತ್ತ ಮಗನನ್ನು ತಾಯಿ ಗೃಹಬಂಧನದಲ್ಲಿಟ್ಟು ಮಾಡಿದ್ದೇನು?

ಸೋಮವಾರ, 11 ಮಾರ್ಚ್ 2019 (15:08 IST)
ತಾಯಿಯೇ ಹೆತ್ತ ಮಗನನ್ನು ಗೃಹ ಬಂಧನದಲ್ಲಿಟ್ಟು ಅಮಾನವೀಯವಾಗಿ ನಡೆದುಕೊಂಡ ಘಟನೆ ನಡೆದಿದೆ.  

ದಾವಣಗೆರೆಯಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಗರದ ದೇವರಾಜ್ ಅರಸ್ ಬಡಾವಣೆ ಮನೆಯೊಂದರಲ್ಲಿ ತನ್ನ ಮಗನನ್ನೆ ಮನೆಯಲ್ಲಿ ಕೂಡಿ ಹಾಕಿದ್ದಾಳೆ. ಕಳೆದ ಹಲವು ತಿಂಗಳಿಂದ ಮಗನನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾಳೆ.

ಇದೀಗ ಸ್ಥಳೀಯರಿಂದ ಮಗನನ್ನು ಬಂಧನದಿಂದ ಮುಕ್ತಿಗೊಳಿಸಲಾಗಿದೆ.  ವಿನಯ್ ಎಂಬಾತನೇ ನತದೃಷ್ಟ ಮಗ. ಈತ ಮಾನಸಿಕ ಅಸ್ವಸ್ಥಗೊಂಡಿದ್ದಾನೆ. ಸ್ಥಳೀಯರು ಅಂಬ್ಯುಲೆನ್ಸ್ ಗೆ ಕರೆ ಮಾಡಿ ಚಿಕಿತ್ಸೆ ಕೊಡಿಸುವ ಸಹಾಯ ಮಾಡಿದ್ದಾರೆ. ಇದೀಗ ವಿನಯ್ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ