ರಾತ್ರಿ ಹೋಗುವ ಅಗತ್ಯ ಏನಿತ್ತು?-ಪೊಲೀಸರನ್ನೇ ಪ್ರಶ್ನಿಸಿದ ಜಮೀರ್ ಅಹಮ್ಮದ್

ಸೋಮವಾರ, 20 ಏಪ್ರಿಲ್ 2020 (10:29 IST)

ಬೆಂಗಳೂರು : ಪಾದರಾಯನಪುರದಲ್ಲಿ ನಡೆದ ಘಟನೆಯ ವೇಳೆ ನಾಪತ್ತೆಯಾಗಿದ್ದ ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಇದೀಗ ಮಾಧ್ಯಮಗಳ ಮುಂದೆ ಪ್ರತ್ಯೇಕ್ಷರಾಗಿದ್ದಾರೆ.

 

ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇಂಥ ಘಟನೆ ನಡೆಯಬಾರದಿತ್ತು. ಘಟನೆ ನಡೆದಿದ್ದು ತಪ್ಪು, ಗಲಾಟೆ ಮಾಡಿದವರ ಮೇಲೆ ಕ್ರಮಕೈಗೊಳ್ಳಲಿ. ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದು ತಪ್ಪು ಎಂದು ಹೇಳಿದ್ದಾರೆ.

 

ಅಲ್ಲದೇ ಬೆಳಿಗ್ಗೆ ಕ್ವಾರಂಟೈನ್ ಗೆ ಕರೆದೊಯ್ಯೋಣ ಎಂದಿದ್ದೆ. ಎಲ್ಲಾ ವ್ಯವಸ್ಥೆ ಮಾಡಿಕೊಡುವೆ ಎಂದಿದ್ದೆ. ಸೀಲ್ ಡೌನ್ ನಿಂದಾಗಿ ಜನರು ಟೆನ್ ಷನ್ ನಲ್ಲಿದ್ದಾರೆ. ರಾತ್ರಿ ಹೋಗುವ ಅಗತ್ಯ ಏನಿತ್ತು? ಎಂದು ಪೊಲೀಸರದ್ದೇ ತಪ್ಪು ಎಂಬ ರೀತಿ ಮಾತನಾಡಿ ಪುಂಡರಿಗೆ ಸಪೋರ್ಟ್ ಮಾಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ