ವಿಡಿಯೋ ಕೇಸ್ ನಲ್ಲಿ ಸಿಲುಕಿಕೊಂಡಿರುವ ಪ್ರಜ್ವಲ್ ರೇವಣ್ಣ ಗೆದ್ದರೆ ಏನಾಗಬಹುದು

Krishnaveni K

ಸೋಮವಾರ, 3 ಜೂನ್ 2024 (09:00 IST)
ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಜ್ವಲ್ ರೇವಣ್ಣಗೂ ನಾಳೆ ಮಹತ್ವದ ದಿನ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಹಾಸನ ಕ್ಷೇತ್ರದಿಂದ ಅವರು ಗೆಲ್ಲಬಹುದೇ ಎಂಬ ಕುತೂಹಲ ಎಲ್ಲರಲ್ಲಿದೆ.

ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಜೂನ್ 6 ರವರೆಗೆ ಅವರು ಎಸ್ಐಟಿ ವಶದಲ್ಲಿರಲಿದ್ದಾರೆ. ಅದಾದ ಬಳಿಕ ಅವರ ಭವಿಷ್ಯ ಏನು ಎಂದು ಸ್ಪಷ್ಟತೆಯಿಲ್ಲ. ಈ ನಡುವೆ ಅವರಿಗೆ ನಾಳೆ ಗೆಲುವಿನ ಆಶಾಕಿರಣವಿದೆ.

ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಮತ್ತೊಮ್ಮೆ ಜೆಡಿಎಸ್ ಅಭ್ಯರ್ಥಿಯಾಗಿ ಹಾಸನದಿಂದ ಕಣಕ್ಕಿಳಿದಿದ್ದಾರೆ. ಅವರಿಗೆ ಎದುರಾಳಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಾಟೀಲ್ ಸ್ಪರ್ಧಿಸಿದ್ದಾರೆ. ಆದರೆ ಹಾಸನ ದೇವೇಗೌಡರ ಕುಟುಂಬದ ಪ್ರಬಲ ಹಿಡಿತವಿರುವ ಕ್ಷೇತ್ರ.

ಚುನಾವಣೆ ವೇಳೆ ಪ್ರಜ್ವಲ್ ಮೇಲೆ ಅಪವಾದ ಬಹಿರಂಗವಾಗಿರಲಿಲ್ಲ. ಹೀಗಾಗಿ ಇಲ್ಲಿ ಪ್ರಜ್ವಲ್ ಗೆಲ್ಲಲುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ. ಆದರೆ ಅವರ ಗೆಲುವಿನಿಂದಾಗಿ ಅವರ ಮೇಲಿನ ಆರೋಪಗಳ ವಿಚಾರಣೆಗೆ ತೊಂದರೆಯಾದರೂ ಅಚ್ಚರಿಯಿಲ್ಲ. ಇದಕ್ಕಾಗಿ ಫಲಿತಾಂಶಕ್ಕೆ ಮೊದಲೇ ಪ್ರಜ್ವಲ್ ಬಾಯಿ ಬಿಡಿಸಲು ಎಸ್ಐಟಿ ಅಧಿಕಾರಿಗಳು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಗೆಲುವಿನ ನಂತರ ಅವರ ಕೇಸ್ ಹಳ್ಳ ಹಿಡಿಯದಂತೆ ಎಚ್ಚರಿಕೆ ವಹಿಸಬೇಕಿದೆ. ಇತ್ತ ಪ್ರಜ್ವಲ್ ಗೂ ತಾವು ಗೆದ್ದರೆ ಸಂಕಷ್ಟದ ಸಮಯದಲ್ಲೂ ಆನೆಬಲ ಬಂದಂತಾಗುತ್ತದೆ.  ಒಂದು ವೇಳೆ ಪ್ರಜ್ವಲ್ ಗೆದ್ದರೂ ಸಂಭ್ರಮಿಸಲಾಗದಂತೆ ಇಕ್ಕಟ್ಟಿನಲ್ಲಿ ಜೆಡಿಎಸ್ ನಾಯಕರು ಇದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ