‘ಸಿದ್ದರಾಮಯ್ಯನವರೇ ನೀವೇನು ಸಾಚಾ ಮುಖ್ಯಮಂತ್ರಿನಾ?’- ಬಿಎಸ್ ಯಡಿಯೂರಪ್ಪ

ಮಂಗಳವಾರ, 23 ಜನವರಿ 2018 (17:21 IST)
ಬೆಂಗಳೂರು : ಬಿಎಸ್ ಯಡಿಯೂರಪ್ಪ ಅವರು ‘ಸಿದ್ದರಾಮಯ್ಯನವರೇ ನೀವೇನು ಸಾಚಾ ಮುಖ್ಯಮಂತ್ರಿನಾ?’ ಎಂದು ಪ್ರಶ್ನಿಸಿದ್ದಾರೆ.

 
ಸುತ್ತೂರು ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ ಅವರು ‘ 70 ಲಕ್ಷ ಮೌಲ್ಯದ ಹ್ಯೂಬ್ಲೆಟ್ ವಾಚ್ ಯಾಕೆ ವಾಪಾಸ್ ನೀಡಿದ್ರಿ. ಸಿದ್ದರಾಮಯ್ಯ ಅವರನ್ನು ಬೀದಿ ಬೀದಿಯಲ್ಲಿ ಹರಾಜು ಹಾಕ್ತೇವೆ. ಎಲ್ಲಾ ಕಡೆ ಯಡಿಯೂರಪ್ಪ ಜೈಲಿಗೆ ಹೋಗಿದ್ರು ಅಂತಾರೆ ಸಿಎಂ. ಸೋನಿಯಾ, ರಾಹುಲ್ ಈಗಲೂ ಬೇಲ್ ಮೇಲೆ ಹೊರಗಿದ್ದಾರೆ. ಟೆಂಡರ್ ದಾರರ ಬಳಿ ಕಮಿಷನ್ ರಾಜಕಾರಣ ಮಾಡೋದು ಸಿದ್ದರಾಮಯ್ಯ. ಅವರು ಹಗಲು ದರೋಡೆ ಮಾಡ್ತಿದ್ದಾರೆ’ ಎಂದು ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಬಿಎಸ್ ಯಡಿಯೂರಪ್ಪ ಅವರು ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ