ಮಾತು ತೊದಲುವಿಕೆಯ ನಿವಾರಣೆಗೆ ಇಲ್ಲಿದೆ ಮನೆಮದ್ದು

ಮಂಗಳವಾರ, 23 ಜನವರಿ 2018 (07:35 IST)
ಬೆಂಗಳೂರು : ಕೆಲವರಿಗೆ ಮಾತನಾಡುವಾಗ ತೊದಲುವ ತೊಂದರೆ ಇರುತ್ತದೆ. ಇದು ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದಾಗಿ ಬೇರೆಯವರೊಡನೆ ಮಾತನಾಡಲು ಮುಜುಗರವಾಗುತ್ತದೆ. ಯಾಕೆಂದರೆ ನಮ್ಮ ಮಾತು ತೊದಲಿದಾಗ ಕೆಲವರು ನಮ್ಮನ್ನು ನೋಡಿ ನಗುತ್ತಾರೆ. ಆದ್ದರಿಂದ ಈ ಸಮಸ್ಯೆಗೆ ಮನೆಯಲ್ಲೇ ಪರಿಹಾರಗಳನ್ನು ಕಂಡುಕೊಳ್ಳಬಹುದು. ಇದರಿಂದ 100% ಆಗದಿದ್ದರೂ 90% ಕಡಿಮೆಯಾಗುವುದಂತೂ ಖಂಡಿತ.


ಒಂದೆಲೆಗ ಎಲೆ ಅಥವಾ ಅದರ ಪುಡಿ (ಬ್ರಾಹ್ಮಿ ಪೌಡರ್) 2 ಚಿಟಿಕೆ ತೆಗೆದುಕೊಂಡು ಅದಕ್ಕೆ 6ಗ್ರಾಂ ನಷ್ಟು ಕಲ್ಲುಸಕ್ಕರೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ ದಿನಕ್ಕೆ 2 ಬಾರಿ ತಿನ್ನುವುದರಿಂದ 2 ತಿಂಗಳೂಳಗೆ ಮಾತು ತೊದಲುವುದು ನಿಲ್ಲುತ್ತದೆ. ಚಿಕ್ಕಮಕ್ಕಳಿಗಾದರೆ ಎರಡನ್ನು 1 ಚಿಟಿಕೆ ತೆಗೆದುಕೊಂಡರೆ ಸಾಕು.


ಬಜೆಯನ್ನು 5 ಗ್ರಾಂ, ತ್ರಿಕಟು ಪುಡಿ (ಒಣಶುಂಠಿ ಪುಡಿ, ಹಿಪ್ಪಲಿ ಪುಡಿ ಹಾಗು ಮಣಸಿನಕಾಳು ಪುಡಿ) 10 ಗ್ರಾಂ, ಬ್ರಾಹ್ಮಿ ಪುಡಿ 15 ಗ್ರಾಂ ಮೂರನ್ನು ಸ್ವಲ್ಪ ಜೇನುತುಪ್ಪದೊಂದಿಗೆ ಮಿಕ್ಸ್ ಮಾಡಿ ದಿನಕ್ಕೆ 1 ಬಾರಿ ತಿಂದರೆ ಮಾತು ತೊದಲುವುದು ಕಡಿಮೆಯಾಗುತ್ತದೆ.


10 ಬಾದಾಮಿಯನ್ನು ನೆನೆಸಿ ಬಿಸಿಲಲ್ಲಿ ಒಣಗಿಸಿ ಸಿಪ್ಪೆ ತೆಗೆದು ಪುಡಿ ಮಾಡಿ, 10 ಮೆಣಸಿನ ಕಾಳಿನ ಪುಡಿ, ರುಚಿಗೆ ತಕಷ್ಟು ಕಲ್ಲುಸಕ್ಕರೆ ಹಾಕಿ ಮಿಕ್ಸ್ ಮಾಡಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು.ಇದರಿಂದಲೂ ಮಾತು ತೊದಲುವುದು ನಿಲ್ಲುತ್ತದೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ