ಬುಲ್ ಬುಲ್ ನಟಿ ರಚಿತಾ ರಾಮ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಂತೆ!

ಮಂಗಳವಾರ, 23 ಜನವರಿ 2018 (16:07 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ತಾರೆಯರು ರಾಜಕೀಯಕ್ಕೆ ಕಾಲಿಡುತ್ತಿರುವ ಸುದ್ದಿ ಆಗಾಗ ಕೇಳಿಬರುತ್ತಿದ್ದು, ಈಗ ಇನ್ನೊಬ್ಬ ಖ್ಯಾತ ನಟಿ ರಾಜಕೀಯ ಕ್ಷೇತ್ರಕ್ಕೆ ಬರಲಿದ್ದಾರೆ ಎಂದು ಸುದ್ದಿ ತಿಳಿದುಬಂದಿದೆ.


ನಟಿ ರಚಿತಾರಾಮ್ ಅವರು ಕನ್ನಡ ಚಲನಚಿತ್ರರಂಗದ ನಂಬರ್ ಒನ್ ನಟಿಯಾಗಿದ್ದು, ಈಗ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಮಂಡ್ಯಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಮೂಲತಃ ಮಂಡ್ಯದ ಒಕ್ಕಲಿಗರ ಸಮುದಾಯಕ್ಕೆ ಸೇರಿದ ರಚಿತಾರಾಮ್ ಅವರು ಮಾಸಾಂತ್ಯಕ್ಕೆ ಪಕ್ಷ ಸೇರಲಿದ್ದು, ಈಗಾಗಲೇ ಜೆಡಿಎಸ್ ವರಿಷ್ಠರ ಜೊತೆ ರಹಸ್ಯ ಮಾತುಕತೆಯಲ್ಲಿ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ