ದುಬಾರಿ ಕಾರಿಗೆ ಪೆಟ್ರೋಲ್ ಬದಲು, ಡೀಸೆಲ್ ಸುರಿದಾಗ ಏನಾಯ್ತು?!

ಮಂಗಳವಾರ, 28 ಮಾರ್ಚ್ 2017 (09:59 IST)
ಮಂಗಳೂರು: ದುಬಾರಿ ಕಾರು ಕೊಳ್ಳುವುದೇ ಕಷ್ಟ. ಅಂತಹದ್ದರಲ್ಲಿ ಖರೀದಿಸಿದ ಮೇಲೆ ಎಡವಟ್ಟು ಮಾಡಿಕೊಂಡಿದರೆ ಅದರ ಪರಿಣಾಮ ಏನಾಗುತ್ತದೆ? ಶಾಸಕ ಬಿ.ಎ. ಮೊಯಿದ್ದೀನ್ ಬಾವ ಅವರಿಗೂ ಅದೇ ರೀತಿ ಆಗಿದೆ.

 

1.65 ಕೋಟಿ ರೂ. ಮೊತ್ತದ ವೋಲ್ವೋ ಕಂಪನಿಯ ಎಕ್ಸ್ ಸಿ 90 ಟಿ8 ಎಂಬ ದುಬಾರಿ ಕಾರು ಖರೀದಿಸಿದ್ದ ಖುಷಿಯಲ್ಲಿದ್ದರು ಬಾವ. ಅದೇ ಖುಷಿಯಲ್ಲಿ ಜಮ್ಮೆಂದು ಬೆಂಗಳೂರಿನಿಂದ ಮಂಗಳೂರಿಗೆ ಒಂದು ರೌಂಡ್ ಹೋಗಿದ್ದರು.

 
ಆದರೆ ಆಗಲೇ ಆಗಿದ್ದು ಎಡವಟ್ಟು. ಮಂಗಳೂರಿನ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ತುಂಬಿಸಲೆಂದು ಹೋದಾಗ ಅಲ್ಲಿನ ಸಿಬ್ಬಂದಿ ಪೆಟ್ರೋಲ್ ಬದಲು ಡೀಸೆಲ್ ತುಂಬಿ ಬಿಟ್ಟರು. ಅಲ್ಲಿಗೆ ದುಬಾರಿ ಕಾರು ಠುಸ್! ಇನ್ನು ಅದನ್ನು ರಿಪೇರಿ ಮಾಡಿಸದೇ ಓಡಿಸುವಂತಿಲ್ಲ. ರಿಪೇರಿ ಮಾಡಿಸಬೇಕಾದರೆ, ಲಾರಿಯಲ್ಲಿ ಬೆಂಗಳೂರಿಗೆ ತರಬೇಕು. ಸದ್ಯಕ್ಕೆ ಪೆಟ್ರೋಲ್ ಬಂಕ್ ನಲ್ಲೇ ದುಬಾರಿ ಕಾರಿನ ಚೆಂದ ನೋಡುತ್ತಾ ನಿಲ್ಲುವ ಪರಿಸ್ಥಿತಿ ಬಾವರದ್ದು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ