ಅಭಿವೃದ್ಧಿ ಬಗ್ಗೆ ತಾರತಮ್ಯ ಆದಾಗ ಪ್ರಶ್ನಿಸಿ, ಆದ್ರೆ ಪ್ರತ್ಯೇಕ ರಾಜ್ಯ ಕೇಳಬೇಡಿ ಎಂದ ಡಿಸಿಎಂ

ಗುರುವಾರ, 18 ಫೆಬ್ರವರಿ 2021 (11:47 IST)
ಕಲಬುರಗಿ : ಉ.ಕರ್ನಾಟಕ ಪ್ರತ್ಯೇಕ ಕೂಗು ಕೇಳಿಬಂದ ಹಿನ್ನಲೆಯಲ್ಲಿ  ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ. ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಐಟಿ ಬಂದಾಗ ಧಾರವಾಡಕ್ಕೆ ಕೊಟ್ಟಿದ್ದೇವೆ. ರಾಯಚೂರಿಗೂ ಐಐಟಿ ಕೊಟ್ಟಿದ್ದೇವೆ. ಹೊಸ ಯೋಜನೆ ಬಂದ್ರೆ ಉ.ಕರ್ನಾಟಕಕ್ಕೆ ಕೊಡ್ತೀವಿ. ಏಮ್ಸ್ ಗೆ ಎಲ್ಲರ ಬೇಡಿಕೆ ಇರುತ್ತೆ. ಕೇಂದ್ರ ಏನ್ ನಿರ್ಧಾರ ಮಾಡುತ್ತೆ ನೋಡೋಣ. ಅಭಿವೃದ್ಧಿ ಬಗ್ಗೆ ತಾರತಮ್ಯ ಆದಾಗ ಪ್ರಶ್ನಿಸಲಿ. ಆದ್ರೆ ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ. ಉ.ಕರ್ನಾಟಕಕ್ಕೆ ಅನುದಾನ ತರಲು ಪ್ರಯತ್ನ ಮಾಡುತ್ತಿದ್ದೇವೆ.. ಕೊರೊನಾದಿಂದ ಹಣಕಾಸಿನ ತೊಂದರೆ ಆಗಿದೆ. ಈಗ ಆರ್ಥಿಕತೆ ಸುಧಾರಣೆ ಆಗುತ್ತಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ