4 ಹೊಸ ಮಾರ್ಗದಲ್ಲಿ BMTC ಸಂಚಾರ

ಶನಿವಾರ, 29 ಜುಲೈ 2023 (16:54 IST)
ಶಕ್ತಿ ಯೋಜನೆ ಜಾರಿಯಾದಾಗಿನಿಂದ ಬಿಎಂಟಿಸಿ ಬಸ್ ಗಳಲ್ಲಿ ಓಡಾಡೋದೇ ಕಷ್ಟವಾಗಿದೆ. ಬಸ್ ಗಳಲ್ಲಿ ಕಾಲ್ ಇಡುವುದಕ್ಕೂ ಜಾಗ ಇರದೆ ಇರುವಷ್ಟು ರಶ್ ಆಗ್ತಿವೆ. ಈಗಿನ ಬಿಎಂಟಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.ಹೌದು ಶಕ್ತಿ ಯೋಜನೆ ಜಾರಿಯಾಗಿ ಇಂದಿಗೆ 2 ತಿಂಗಳು ತುಂಬುತ್ತಿದೆ. ಶಕ್ತಿ ಯೋಜನೆಗೆ ಹೊಸದರಲ್ಲಿ ಅಪಸ್ವರ ಎದ್ದಿತ್ತು. ಇದೆಲ್ಲದರ ಮದ್ದೆ ಶಕ್ತಿ ಯೋಜನೆ ರಾಜ್ಯದಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. ಬೆಂಗಳೂರಿನಂತ ಮಾಹಾ ನಗರಗದಲ್ಲಿ ಓಡಾಡುವ ಲಕ್ಷಾಂತರ ಮಹಿಳೆಯರಿಗೆ ಶಕ್ತಿ ಯೋಜನೆ ತುಂಬಾ ಅನುಕೂಲಕರವಾಗಿದೆ. ಆದ್ರೆ ಯೋಜನೆ ಜಾರಿ ಬಂದಾಗಿನಿಂದ ಒಂದ್ಕಡೆ ಬಸ್ ಗಳು ಫುಲ್ ರಶ್ ಆಗಿ ಸಂಚಾರ ಮಾಡುತ್ತಿದ್ದರೆ, ಕೆಲ ಮಾರ್ಗಗಳಲ್ಲಿ ಬಸ್ ಸಂಚಾರವೇ ಇಲ್ಲದಂತಾಗಿದೆ. ಹೀಗಾಗಿನೆ BMTC ಮಹತ್ವದ ನಿರ್ಧಾರ ಒಂದು ಮಾಡಿದ್ದು ಜನರಿಗೆ ಸುಖಕರ ಪ್ರಯಾನ ಒದಗಿಸಲ್ಲು ಮುಂದಾಗಿದೆ.

BMTC ಪ್ರಯಾಣಿಕರಿಗೆ ಅನಕೂಲಾಗಲಿ ಎಂಬ ನಿಟ್ಟಿನಲ್ಲಿ ಈಗಾಗಲೇ ನಗರದಲ್ಲಿ 4 ಹೊಸ ಬಸ್ ಮಾರ್ಗಗಳಲ್ಲಿ ತನ್ನ ಸೇವೆಯನ್ನ ಆರಂಭಿಸಿದೆ. ಹಾಗಾದ್ರೆ ಯಾವ ಯಾವ ಮಾರ್ಗದಲ್ಲಿ ಸೇವೆ ಆರಮಭವಾಗಿದೆ ಅಂತ ನೊಡೊದಾದ್ರೆ..1) ವಿದ್ಯಾರಣ್ಯಪುರ ದಿಂದ ಲಗ್ಗೆರೆ ಮಾರ್ಗ ಸಂಖ್ಯೆ MF 28ರಲ್ಲಿ ಮೂರು ಬಸ್ಗಳ ಸೇವೆಯನ್ನು ಆರಂಭಿಸಿದೆ. ಇದು ರಾಮಚಂದ್ರಪುರ, ಬಿ.ಇ.ಎಲ್‌ ವೃತ್ತ, ಹೆಚ್.ಎಂ.ಟಿ ಆಡಿಟೋರಿಯಂ ಮತ್ತು ಜಾಲಹಳ್ಳಿ ಕ್ರಾಸ್‌ ಮಾರ್ಗವಾಗಿ ಲಗ್ಗೆರೆ ತಲುಪಲಿದೆ.2) ಇನ್ನೂ K.R ಮಾರ್ಕೆಟ್ ಇಂದ  ವಿದ್ಯಾರಣ್ಯಪುರಕ್ಕೆ 276- ಇ ಹೊಸ ಮಾರ್ಗದಲ್ಲಿ 5 ಬಸ್ಗಳ ಸೇವೆಯನ್ನ ಆರಂಭಿಸಿದೆ. ಇನ್ನೂ ಈ ಬಸ್ ಗಳು ಕೆಂಪೇಗೌಡ ಬಸ್ ನಿಲ್ದಾಣ, ಮಲ್ಲೇಶ್ವರಂ, ಮತ್ತಿಕೆರೆ ಮತ್ತು B.E.L ಸರ್ಕಲ್ ಮೂಲಕ ಬಸ್ಗಳು ಸಂಚರಿಸ್ತಿವೆ. ಇನ್ನೂ ಯಶವಂತಪುರ ಟಿಟಿಎಂಸಿಯಿಂದ ನಾಯಂಡಹಳ್ಳಿ ಜಂಕ್ಷನ್ಗೆ 401 N.Y ಮಾರ್ಗ ಸಂಖ್ಯೆಯಲ್ಲಿ ಹೊಸದಾಗಿ 7 ಬಸ್ಗಳ ಸೇವೆಯನ್ನು ಆರಂಭಿಸಿದ್ದು, ಈ ಬಸ್ ಗಳು ಮಲ್ಲೇಶ್ವರಂ, ಮೋದಿ ಆಸ್ಪತ್ರೆ, ಹಾವನೂರು ಸರ್ಕಲ್‌, K.H.B ಕಾಲೋನಿ, ಸುಮನಹಳ್ಳಿ ಜಂಕ್ಷನ್, ನಾಗರಬಾವಿ ಸರ್ಕಲ್ ಮಾರ್ಗದಲ್ಲಿ ಬಸ್ ಸಂಚರಿಸ್ತಿವೆ. ಇನ್ನು 500 ಕ್ಯೂ.ಎ ಮಾರ್ಗದಲ್ಲಿ ಗೊರಗುಂಟೆಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಕೆ.ಆರ್ ಪುರ ಮೆಟ್ರೋ ಸ್ಟೇಷನ್ವರೆಗೆ 11 ಬಸ್ಗಳ ಸೇವೆ ಆರಂಭವಾಗಿದ್ದು ಹೆಬ್ಬಾಳ, ಟಿನ್ ಫ್ಯಾಕ್ಟರಿ ಮಾರ್ಗದಲ್ಲಿ ಈ ಬಸ್ಗಳು ಸಂಚರಿಸುತ್ತಿವೆ. ನಗರದ ಜನರಿಗೆ ಅನಕೂಲ ಆಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಇನಸ್ಟು ಹೊಸ ಮಾರ್ಗಗಳಲ್ಲಿ BMTC ಬಸ್ ಗಳ ಸೇವೆ  ಆರಂಭವಾಗಲಿದೆ ಎಂದು ಅಧಿಕಾರಿಗಳು ತೀಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ