ಮಹಾಶಿವರಾತ್ರಿ ಹಬ್ಬದಂದೇ ಮಕ್ಕಳ ಪ್ರಾಣ ತೆಗೆದ ತಾಯಿ

ಮಂಗಳವಾರ, 5 ಮಾರ್ಚ್ 2019 (07:25 IST)
ಹೈದರಾಬಾದ್ : ಮಹಾಶಿವರಾತ್ರಿ ಹಬ್ಬದಂದು ತಾಯಿಯೊಬ್ಬಳು ತಾನು ಹೆತ್ತು ಹೊತ್ತು ಸಾಕಿದ ಮಕ್ಕಳನ್ನೇ ಇಟ್ಟಿಗೆಯಿಂದ ಹೊಡೆದು ಸಾಯಿಸಿದ ಅಮಾನವೀಯ ಘಟನೆ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಗೋದಾವರಿ ಖನಿ ಗ್ರಾಮದ ಸಪ್ತಗಿರಿ ನಗರದಲ್ಲಿ  ನಡೆದಿದೆ.


ರಮಾದೇವಿ ಮಕ್ಕಳನ್ನು ಕೊಂದ ತಾಯಿ. ಶ್ರೀಕಾಂತ್​, ರಮಾದೇವಿ ದಂಪತಿಗೆ ಇಬ್ಬರು ಗಂಡು ಮಕ್ಕಳು. ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ರಮಾದೇವಿ ಆಗಾಗ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಜಗಳವಾಡುತ್ತಿದ್ದಳು. ಆದರೆ ಮಹಾಶಿವರಾತ್ರಿ ಹಬ್ಬದಂದು ತಂದೆ ಪೂಜಾ ಸಾಮಾಗ್ರಿಗಳನ್ನು ತರಲು ಅಂಗಡಿಗೆ ಹೋಗಿದ್ದಾಗ ಮಕ್ಕಳೊಂದಿಗೆ ಜಗಳವಾಡಿ ಮಕ್ಕಳ ತಲೆಗೆ ಇಟ್ಟಿಗೆಯಿಂದ ಹೊಡೆದಿದ್ದಾಳೆ.


ಪರಿಣಾಮ 11 ವರ್ಷದ ಹಿರಿಯ ಮಗ ಅಜೇಯ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.  ಇನ್ನು  8 ವರ್ಷದ ಕಿರಿಯ ಮಗ ಆರ್ಯ ತೀವ್ರವಾಗಿ ಗಾಯಗೊಂಡಿದ್ದು ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಿಸದೇ ಆತನೂ ಮೃತಪಟ್ಟಿದ್ದಾನೆ. 
ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ