ಭಾರತ-ನ್ಯೂಜಿಲೆಂಡ್ ಟಿ20: ನ್ಯೂಜಿಲೆಂಡ್ ರನ್ ಮಳೆಯಲ್ಲಿ ಕೊಚ್ಚಿ ಹೋದ ಟೀಂ ಇಂಡಿಯಾ

ಬುಧವಾರ, 6 ಫೆಬ್ರವರಿ 2019 (14:20 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಅತಿಥೇಯ ನ್ಯೂಜಿಲೆಂಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಭಾರತಕ್ಕೆ ಗೆಲ್ಲಲು 220 ರನ್ ಗಳ ಬೃಹತ್ ಗುರಿ ನಿಗದಿಪಡಿಸಿದೆ.


ಭಾರತೀಯ ಬೌಲರ್ ಗಳನ್ನು ಸಾಂಘಿಕವಾಗಿ ಚೆಂಡಾಡಿದ ನ್ಯೂಜಿಲೆಂಡ್ ಬ್ಯಾಟ್ಸ್ ಮನ್ ಗಳು ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಪೇರಿಸಿತು. ಆರಂಭಿಕ ಟಿಮ್ ಸೀಫರ್ಟ್ 43 ಬಾಲ್ ಗಳಲ್ಲಿ 84 ರನ್, ಕಾಲಿನ್ ಮುನ್ರೋ 20 ಬಾಲ್ ಗಳಲ್ಲಿ 34 ರನ್, ನಾಯಕ ಕೇನ್ ವಿಲಿಯಮ್ಸ್ 22 ಬಾಲ್ ಗಳಲ್ಲಿ 34 ಸಿಡಿಸಿದರು.

ಭಾರತದ ಪರ ಎಲ್ಲಾ ಬೌಲರ್ ಗಳೂ ದುಬಾರಿ ರನ್ ನೀಡಿದವರೇ. ಇವರ ಪೈಕಿ ಹಾರ್ದಿಕ್ ಪಾಂಡ್ಯ 2 ವಿಕೆಟ್, ಉಳಿದಂತೆ ಖಲೀಲ್ ಅಹಮ್ಮದ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಾಹಲ್ ತಲಾ 1 ವಿಕೆಟ್ ಪಡೆದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ