ಟೋಲ್ ಕಟ್ಟದೇ ಸಿಬ್ಬಂದಿ ಮೇಲೆ ವಾಹನ ಹರಿಸಿದ ಭೂಪ
ಭಾನುವಾರ, 29 ಜುಲೈ 2018 (16:29 IST)
ಟೋಲ್ ನಲ್ಲಿ ಹಣ ಕಟ್ಟದೆ ಎಸ್ಕೇಪ್ ಆಗುತ್ತಿದ್ದಂತಹ ಕಾರನ್ನ ತಡೆಯಲು ಹೋದ ಟೋಲ್ ಸಿಬ್ಬಂದಿ ಮೇಲೆಯೇ ಕಾರು ಚಾಲಾಯಿಸಿ ಕಾರ್ ಡ್ರೈವರ್ ಒಬ್ಬ ಪರಾರಿಯಾಗಿದ್ದಾನೆ. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಬಳಿಯ ಬೆಂಗಳೂರು - ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನವಯುಗ ಟೋಲ್ ನಲ್ಲಿ.
ಟೋಲ್ ಸಿಬ್ಬಂದಿ ವೀರೇಂದ್ರ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದಾನೆ. ಈ ವೇಳೆ ತುಮಕೂರು ಕಡೆಯಿಂದ ಬಂದ ಸ್ವಿಫ್ಟ್ ಕಾರೊಂದು ಸುಂಕದ ಹಣ ಇಪ್ಪತ್ತು ರೂಪಾಯಿ ಕಟ್ಟದೆ ಹೋಗಲು ಪ್ರಯತ್ನ ಮಾಡುತ್ತಾನೆ. ಕೂಡಲೇ ಅಲ್ಲೇ ಇದ್ದ ಟೋಲ್ ಸಿಬ್ಬಂದಿ, ವೀರೇಂದ್ರ ಕಾರನ್ನ ತಡೆಯಲು ಬಂದಾಗ, ಆ ಕಾರು ಚಾಲಕ ಆತನ ಮೇಲೆಯೇ ಕಾರು ಚಾಲಾಯಿಸಿ ಎಸ್ಕೇಪ್ ಆಗಿದ್ದಾನೆ.
ಇನ್ನೂ ಗಾಯಗೊಂಡ ವೀರೇಂದ್ರ ಮೂಲತಃ ಆಂಧ್ರ ಮೂಲದ ಸಿಬ್ಬಂದಿ. ಅತ್ತ ಟೋಲ್ ಆಡಳಿತ ಮಂಡಳಿ ಮಾತ್ರ ತನ್ನ ಸಿಬ್ಬಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯಾವುದೇ ರೀತಿಯ ಸಹಾಯಕ್ಕೂ ಮುಂದಾಗಿಲ್ಲ ಎನ್ನಲಾಗಿದೆ. ಹೀಗಾಗಿ ಅಮಾನವೀಯತೆ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತನ್ನ ಊರಿಗೆ ತೆರಳಿದ್ದಾನೆ.
ದಿನಕ್ಕೆ ಲಕ್ಷ ಲಕ್ಷ ಸಂಪಾದನೆ ಮಾಡುವ ಟೋಲ್ ಸಂಸ್ಥೆ ತನ್ನ ಸಿಬ್ಬಂದಿಯ ನೆರವಿಗೆ ಬಂದಿಲ್ಲವೆಂದು, ಇಲ್ಲಿನ ಸಿಬ್ಬಂದಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಬಗ್ಗೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.