ಓಮನ್ ಅಪಘಾತದಲ್ಲಿ ರಾಜ್ಯದ ಯುವಕ ದಾರುಣ ಸಾವು

ಗುರುವಾರ, 26 ಜುಲೈ 2018 (20:17 IST)
ಒಮನ್ ರಸ್ತೆ ಅಪಘಾತದಲ್ಲಿ ರಾಜ್ಯದ ಕುಂದಾಪುರ ಮೂಲದ ಯುವಕ ದಾರುಣ ಸಾವು ಕಂಡಿದ್ದಾನೆ. ಕುಂದಾಪುರ  ತಾಲೂಕು ಕೋಣಿ ಗ್ರಾಮ ನಿವಾಸಿ ಯುವಕ ಗಲ್ಫ್ ರಾಷ್ಟ್ರ ಒಮನ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಕೋಣಿ ಗ್ರಾಮ ಚಂದ್ರ ಮತ್ತು ಸುಮನಾ ಎಂಬವರ ಮಗ ರಾಜೇಂದ್ರ (25) ಮೃತಪಟ್ಟವರು. ರಾಜೇಂದ್ರ ಶೆಟ್ಟಿ ಕೆಲಸ ಸ್ಥಳದಿಂದ ವಾಸ್ತವ್ಯದ ಕೋಣೆಯತ್ತ ತೆರಳುತ್ತಿದ್ದ ಸಂದರ್ಭ ಸರಕು ಲಾರಿಯೊಂದು ಗುದ್ದಿದ್ದು, ಸಾವು ಬದುಕಿನ ಹೋರಾಟದ ನಡುವೆ ರಾಜೇಂದ್ರ ಸಹೋದರಿಯೊಂದಿಗೆ ಮೊಬೈಲ್ನಲ್ಲಿ ಮಾತಾಡುತ್ತಿದ್ದರು ಎನ್ನಲಾಗಿದೆ.

ಇಂಜಿನಿಯರಿಂಗ್ ಪದವೀಧರ ರಾಜೇಂದ್ರ ಅವರು ಕೇವಲ ಐದು ತಿಂಗಳ ಹಿಂದಷ್ಟೇ ಒಮನ್ ದೇಶಕ್ಕೆ ಉದ್ಯೋಗಕ್ಕೆ ತೆರಳಿದ್ದರುಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ