ತಲ್ವಾರ್‌ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಭೂಪ

ಸೋಮವಾರ, 4 ಜೂನ್ 2018 (20:15 IST)
ಹುಬ್ಬಳ್ಳಿ: ಕಿಡಿಗೇಡಿಯೊಬ್ಬ ತಲ್ವಾರ್‌ನಿಂದ ಕೇಕ್ ಕತ್ತರಿಸಿ ವಿಚಿತ್ರವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಘಟನೆ ವರದಿಯಾಗಿದೆ.
ತಲ್ವಾರ್ ನಿಂದ ಕೇಕ್ ಕತ್ತರಿಸಿ ಅದರಿಂದ್ಲೇ ತಿನ್ನಿಸಿದ ಭೂಪನ ಕೃತ್ಯದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದುಹುಬ್ಬಳ್ಳಿಗರು ವೀಡಿಯೋ ನೋಡಿ ಬೆಚ್ಚಿಬಿದ್ದಿದ್ದಾರೆ.
 
ಗಣೇಶ ಪೇಟ್ ನಲ್ಲಿರುವ ಮೀನಿನ ಅಂಗಡಿ ಮಾಲೀಕ ಇರ್ಶಾದ್ ಎಂಬಾತನಿಂದ ಈ ಕೃತ್ಯ ನಡೆದಿದ್ದು, ಮೀನಿನ ಆಕಾರದಲ್ಲಿರುವ ಕೇಕ್‌ನ್ನು ತಲ್ವಾರ್‌ನಿಂದ ಕಟ್ ಮಾಡಿದ್ದಲ್ಲದೇ ತಲ್ವಾರ್‌ನಿಂದಲೇ ಕೇಕ್ ತಿನ್ನಿಸಿದ ಇತನ ಕೃತ್ಯಕ್ಕೆ ಸಾರ್ವಜನಿಕರು ದಂಗಾಗಿದ್ದಾರೆ.
 
ಈತನ ಮೀನಿನ ಅಂಗಡಿಯಲ್ಲಿಯೇ ಸ್ನೇಹಿತರ ಜತೆ ಸೇರಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ಭೂಪ. ಈ ವಿಚಿತ್ರ ಆಚರಣೆ ವೀಡಿಯೂ ಫೇಸ್ಬುಕ್‌ನಲ್ಲಿ ಹಾಕಿದ್ದರಿಂದ ಇದೀಗ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ