ಅಂಬೇಡ್ಕರ್ ಬಗ್ಗೆ ಫೇಸ್ ಬುಕ್‌ನಲ್ಲಿ ಅವಹೇಳನ: ಯುವಕನಿಗೆ ಬಿತ್ತು ಗೂಸಾ

ಭಾನುವಾರ, 1 ಏಪ್ರಿಲ್ 2018 (14:53 IST)
ಡಾ. ಬಾಬಾಸಾಹೇಬ ಅಂಬೇಡ್ಕರ್ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕೆ ಯುವಕನಿಗೆ ಕೆಲವರು ಮನಬಂದಂತೆ ಥಳಿಸಿದ ಘಟನೆ ವರದಿಯಾಗಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಪತ್ತೇಪುರ ಗ್ರಾಮದ ಗ್ರಾಮಸ್ಥರು, ಅಂಬೇಡ್ಕರ್ ಅವರ ಬಗ್ಗೆ ಕೇವಲವಾಗಿ ಬರೆದಿದ್ದರಿಂದ ಆಕ್ರೋಶಗೊಂಡ  ಪತ್ತೇಪುರ ನಿವಾಸಿ ಬಿ. ಚಂದ್ರಶೇಖರ ಎಂಬ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
 
ದಲಿತ ಸಮುದಾಯದವನಾಗಿ ಅಂಬೇಡ್ಕರ್ ಬಗ್ಗೆ ಕೇವಲವಾಗಿ ಬರೆದು ಪೋಸ್ಟ್ ಮಾಡಿದ್ದ ಚಂದ್ರಶೇಖರ. ಇದರಿಂದ ಆಕ್ರೋಶಗೊಂಡು ತಮ್ಮದೆ ಸಮಾಜಬಾಂಧವನಿಗೆ ಥಳಿಸಿರುವ ದಲಿತರು. ಆರೋಪಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.
 
ಆರೋಪಿ ಚಂದ್ರಶೇಖರ್ ವಿರುದ್ಧ ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ