India Pakistan: ಶಾಂತಿ ಕಾಪಾಡಿ ಎಂದು ಸಲಹೆ ಕೊಟ್ಟ ಚೀನಾಗೆ ತಕ್ಕ ಉತ್ತರ ಕೊಟ್ಟ ಅಜಿತ್ ದೋವಲ್

Krishnaveni K

ಭಾನುವಾರ, 11 ಮೇ 2025 (11:36 IST)
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಸಂಘರ್ಷ ನಡುವೆ ಶಾಂತಿ ಕಾಪಾಡಿ ಎಂದು ಭಾರತಕ್ಕೆ ಸಲಹೆ ಕೊಟ್ಟ ಚೀನಾಗೆ ಅಜಿತ್ ದೋವಲ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

ಪಹಲ್ಗಾಮ್ ದಾಳಿ ಬಳಿಕ ಭಾರತ ಉಗ್ರರ ಅಡಗುದಾಣಗಳನ್ನು ಗುರಿಯಾಗಿರಿಸಿ ಆಪರೇಷನ್ ಸಿಂಧೂರ್ ನಡೆಸಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತದ ಮೇಲೆ ದಾಳಿ ಆರಂಭಿಸಿತ್ತು. ನಾಗಿರಕರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿತು. ಕದನ ವಿರಾಮ ಘೋಷಣೆ ಬಳಿಕವೂ ಉಲ್ಲಂಘಿಸಿ ದಾಳಿ ಮುಂದುವರಿಸಿತ್ತು.

ಈ ನಡುವೆ ಚೀನಾ ನಮ್ಮ ಬೆಂಬಲ ಪಾಕಿಸ್ತಾನಕ್ಕೆ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದೆ. ಹಾಗಿದ್ದರೂ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಗೆ ಕರೆ ಮಾಡಿರುವ ಚೀನಾ ವಿದೇಶಾಂಗ ಸಚಿವ ಪ್ರಾದೇಶಿಕ ಸುಸ್ಥರತೆಗಾಗಿ ಶಾಂತಿ ಕಾಪಾಡಿ ಎಂದು ಪುಕ್ಸಟೆ ಸಲಹೆ ಕೊಟ್ಟಿದೆ.

ಇದಕ್ಕೆ ತಕ್ಕ ಉತ್ತರ ನೀಡಿರುವ ಅಜಿತ್ ದೋವಲ್ ಯುದ್ಧ ಭಾರತದ ಆಯ್ಕೆಯೇ ಅಲ್ಲ ಮತ್ತು ಯಾವುದೇ ಪಕ್ಷದ ಹಿತಾಸಕ್ತಿಯಲ್ಲ ಎಂದಿದ್ದಾರೆ. ಭಾರತೀಯ ಭದ್ರತಾ ಪಡೆಗಳಿಗೆ ಸಾಕಷ್ಟು ಸಾವು, ನೋವುಗಳಾಗಿವೆ. ಈ ದಾಳಿಯು ಭಾರತದ ಭದ್ರತಾ ಪಡೆಗಳಿಗೆ ತೀವ್ರ ಹೊಡೆತ ನೀಡಿದೆ. ಇದಕ್ಕೆ ಪ್ರತಿಯಾಗಿ ಭಾರತ ಭದ್ರತಾ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ