Hubballi: ಹುಬ್ಬಳ್ಳಿ 5 ವರ್ಷದ ಬಾಲಕಿ ರೇಪ್ ಮಾಡಿದ ಪಾಪಿಯ ಎನ್ ಕೌಂಟರ್ ಮಾಡಿದ ಲೇಡಿ ಆಫೀಸರ್ ಇವರೇ

Krishnaveni K

ಸೋಮವಾರ, 14 ಏಪ್ರಿಲ್ 2025 (10:28 IST)
Photo Credit: X
ಹುಬ್ಬಳ್ಳಿ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿಯನ್ನು ಎನ್ ಕೌಂಟರ್ ಮಾಡಿ ಬಿಸಾಕಿದ ಪಿಎಸ್ ಐ ಅನ್ನಪೂರ್ಣ ಯಾರು ಎಂದು ನೀವೇ ನೋಡಿ.

ಬಿಹಾರ ಮೂಲದ ಆರೋಪಿ ರಿತೇಶ್ ಕುಮಾರ್ ಪತ್ತೆಗೆ ನಿನ್ನೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಪಿಎಸ್ಐ ಅನ್ನಪೂರ್ಣ ನೇತೃತ್ವದ ತಂಡಕ್ಕೆ ಆರೋಪಿಯ ಸುಳಿವು ಸಿಕ್ಕಿತ್ತು. ಅದರಂತೆ ಬಂಧಿಸಲು ಹೋದಾಗ ಆತ ಪ್ರತಿ ದಾಳಿ ಮಾಡಿದ್ದ.

ಆಗ ಲೇಡಿ ಆಫೀಸರ್ ಅನ್ನಪೂರ್ಣ ಆರೋಪಿಗೆ ಗುಂಡು ಹಾರಿಸಿ ಎದೆ ಸೀಳಿದ್ದರು. ಆಸ್ಪತ್ರೆಗೆ ಸಾಗಿಸುವ ಮಧ್ಯದಲ್ಲೇ ಪಾಪಿ ಸಾವನ್ನಪ್ಪಿದ್ದ. ಬಾಲಕಿ ಮೇಲಿನ ಕೃತ್ಯ ಬಯಲಿಗೆ ಬಂದ ಮೇಲೆ ಆತನನ್ನು ಎನ್ ಕೌಂಟರ್ ಮಾಡಿ ಎಂದು ಸಾರ್ವಜನಿಕರಿಂದಲೇ ಆಗ್ರಹವಿತ್ತು.

ಅದಕ್ಕೆ ತಕ್ಕಂತೆ ಆತ ಎನ್ ಕೌಂಟರ್ ಆದಾಗ ಸಾರ್ವಜನಿಕರು ಪೊಲೀಸರಿಗೆ ಜೈ ಕಾರ ಹಾಕಿದ್ದಾರೆ. ಇನ್ನು, ಲೇಡಿ ಪಿಎಸ್ಐ ಅನ್ನಪೂರ್ಣ ಸೇರಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿಗಳಿಗೂ ಘಟನೆಯಲ್ಲಿ ಗಾಯಗಳಾಗಿವೆ. ಇದೀಗ ಲೇಡಿ ಆಫೀಸರ್ ಅನ್ನಪೂರ್ಣ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಪಿಎಸ್ ಐ ಅನ್ನಪೂರ್ಣ ಮೂಲತಃ ಮೂಡಲಗಿ ತಾಲೂಕಿನವರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ