ಬನ್ನೇರುಘಟ್ಟ ಉದ್ಯಾನವನಕ್ಕೆ ಆಗಮಿಸಿದ ಹೊಸ ಅತಿಥಿ ಯಾರು ಗೊತ್ತಾ?
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೊಸ ಅತಿಥಿ ಆಗಮನವಾಗಿದೆ.
ಸಿಂಗಳೀಕ ಬಾಲದ ಕೋತಿ ಮರಿಯೊಂದಕ್ಕೆ ಜನ್ಮ ನೀಡಿದೆ. ತಾಯಿ -ಮರಿ ಆರೋಗ್ಯವಾಗಿವೆ ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ. ಈ ಮರಿಯು 10 ವರ್ಷದ ಮಾಮನ್ ಗಂಡು ಹಾಗು 6 ವರ್ಷದ ಹೆಣ್ಣು ಸಲಾಜ್ ಗೆ ಜನಿಸಿದ ಮರಿಯಾಗಿದೆ. ಇನ್ನು ಈ ಅಪರೂಪದ ಸಿಂಗಳೀಕಗಳನ್ನು 2015 ಆಗಸ್ಟ್ 4 ರಂದು ತ್ರೀಪುರ ಸೇಫಿಸೋಲಾ ಜೂವಾಲಾಜಿಕಲ್ ಪಾರ್ಕನಿಂದ 2 ಗಂಡು 1 ಹೆಣ್ಣು ಸಿಂಗಳೀಕಗಳನ್ನ ವಿನಿಮಯ ಯೋಜನೆಯಡಿ ತರಸಿಕೊಳ್ಳಲಾಗಿತ್ತು.
ಈ ಅಪರೂಪದ ಸಿಂಗಳಿಕ ಮರಿಗಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗಿವೆ. ಸದ್ಯ ಬನ್ನೇರುಘಟ್ಟ ಉದ್ಯಾನವನದಲ್ಲಿ ಮೂರು ಸಿಂಗಳೀಕಗಳಿಂದ ಈಗ 7 ಕ್ಕೆ ಏರಿಕೆಯಾಗಿದ್ದು, ವೀಕ್ಷಣೆ ಮಾಡುವ ಪ್ರವಾಸಿಗರಲ್ಲಿ ಸಂತಸ ತಂದಿದೆ.